ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಮಾ–2023: ಕನ್ನಡದಲ್ಲಿಯೇ ಸಂಭಾಷಣೆ ನಡೆಸಿದ ಜೂನಿಯರ್ NTR ಹಾಗೂ ರಿಷಬ್‌ ಶೆಟ್ಟಿ

Published 16 ಸೆಪ್ಟೆಂಬರ್ 2023, 10:36 IST
Last Updated 16 ಸೆಪ್ಟೆಂಬರ್ 2023, 10:36 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚಿಗೆ ನಡೆದ ಸೈಮಾ–2023ರ ಕಾರ್ಯಕ್ರಮದಲ್ಲಿ ತೆಲುಗು ನಟ ಜೂನಿಯರ್ ಎನ್‌ಟಿಆರ್ ಹಾಗೂ ನಟ ರಿಷಬ್‌ ಶೆಟ್ಟಿ ಇಬ್ಬರೂ ಕನ್ನಡದಲ್ಲಿ ಮಾತನಾಡಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ

ಇಬ್ಬರೂ ನಟರು ಕನ್ನಡದಲ್ಲಿ ಮಾತನಾಡಿರುವ ಈ ವಿಡಿಯೊವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಸೈಮಾ–2023ರ ವೇದಿಕೆಯಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ರಿಷಬ್‌ ಶೆಟ್ಟಿ ಇಬ್ಬರು ಕನ್ನಡದಲ್ಲಿಯೇ ಮಾತನಾಡುವ ಮೂಲಕ ಪರಸ್ಪರ ಅಭಿನಂದನೆಯನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ‘ನಮ್ಮ ಅಮ್ಮ ಅವರದ್ದು ಕುಂದಾಪುರ ಹಾಗಾಗಿ ಕನ್ನಡ ಸ್ಪಲ್ವ ಮಾತನಾಡಲು ಬರುತ್ತದೆ. ಅಮ್ಮ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ‘ ಎಂದು ಜೂನಿಯರ್ ಎನ್‌ಟಿಆರ್ ಹೇಳಿದರೆ, ‘ನೀವು ಹೈದರಾಬಾದ್‌ನವರು ಅನ್ನಿಸುವುದಿಲ್ಲ... ನಮ್ಮವರೇ ಎನಿಸುತ್ತಿರಿ‘ ಎಂದು ರಿಷಬ್‌ ಶೆಟ್ಟಿ ತಿಳಿಸಿರುವ ದೃಶ್ಯಗಳು ವಿಡಿಯೊದಲ್ಲಿದೆ.

ವಿಡಿಯೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಸೈಮಾ–2023ರಲ್ಲಿ ಕಾಂತಾರ ಹಾಗೂ ಆರ್‌ಆರ್‌ಆರ್‌ ಚಿತ್ರವು ಅನೇಕ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT