ಶನಿವಾರ, ಸೆಪ್ಟೆಂಬರ್ 18, 2021
24 °C

ನೀಲಿ ಸಿನಿಮಾಗಳಲ್ಲಿ ತೊಡಗಿಕೊಂಡವರು ಕೆಟ್ಟವರಲ್ಲ: ನಟಿ ಸೋಮಿ ಅಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ನೀಲಿ ಸಿನಿಮಾಗಳಲ್ಲಿ ನಟಿಸುವುದು ತಪ್ಪಲ್ಲ ಎಂದು ಬಾಲಿವುಡ್‌ ನಟಿ ಹಾಗೂ ನಟ ಸಲ್ಮಾನ್‌ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಹೇಳಿದ್ದಾರೆ.

ಸೋಮಿ ಅಲಿ ಅವರು ಇತ್ತೀಚೆಗೆ ಪಿಂಕ್‌ವಿಲ್ಲಾ ಸಿನಿಮಾ ಸುದ್ದಿ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ರಾಜ್‌ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಕೂಡ ಪತಿ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ಭಾರತದಲ್ಲಿ ಶೃಂಗಾರದಂತಹ ವಿಡಿಯೊ ನಿರ್ಮಾಣಕ್ಕೆ ಅವಕಾಶವಿದೆ ಎಂದು ಹೇಳುವ ಮೂಲಕ ರಾಜ್ ಕುಂದ್ರಾ ನೀಲಿ ಚಿತ್ರಗಳನ್ನು ನಿರ್ಮಾಣ ಮಾಡಿಲ್ಲ ಎಂದು ಹೇಳಿದ್ದಾರೆ.

ನೀಲಿ ಚಿತ್ರಗಳ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ ಕುಂದ್ರಾ ನ್ಯಾಯಾಂಗ ಬಂಧನದಲ್ಲಿರುವ  ಬೆನ್ನಲ್ಲೇ ನೀಲಿ ಸಿನಿಮಾಗಳಲ್ಲಿ ನಟಿಸುವುದು ತಪ್ಪಲ್ಲ ಎಂದು ಸೋಮಿ ಅಲಿ ಹೇಳಿದ್ದಾರೆ.

ನೀಲಿ ಚಿತ್ರಗಳಲ್ಲಿ ನಟಿಸುವುದು ತಪ್ಪಲ್ಲ ಹಾಗೇ ಅಂತಹ ವಿಡಿಯೊಗಳ ನಿರ್ಮಾಣ ಮತ್ತು ನಿರ್ದೇಶನ ಮಾಡುವುದು ಕೂಡ ತಪ್ಪಲ್ಲ, ಇದರಲ್ಲಿ ತೊಡಗಿಸಿಕೊಳ್ಳುವವರನ್ನು ನಾವು ಕೆಟ್ಟವರೆಂದು ಭಾವಿಸಬಾರದು ಎಂದು ಹೇಳಿದ್ದಾರೆ.

ಇದರಲ್ಲಿ ತೊಡಗಿಕೊಂಡವರು ಲೈಂಗಿಕ ದೌರ್ಜನ್ಯ ಅಥವಾ ಹಣಕಾಸಿನ ಮೋಸ ಮಾಡಬಾರದು. ಹಾಗೇ ಮಾಡಿದರೆ ಅದು ತಪ್ಪು ಎಂದು ಸೋಮಿ ಅಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು