ಗುರುವಾರ , ಮಾರ್ಚ್ 30, 2023
23 °C

ಹಾಡು ನೋಡಿ: ಸೂರ್ಯವಂಶಿಯಲ್ಲೂ ’ಟಿಪ್...ಟಿಪ್‌...ಬರಸಾ’ ಗುನುಗು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ಷಯ್‌ ಕುಮಾರ್‌ ಹಾಗೂ ಕತ್ರಿನಾ ಕೈಫ್‌ ಅಭಿನಯದ ಸೂರ್ಯವಂಶಿ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು ಚಿತ್ರದ ’ಟಿಪ್...ಟಿಪ್‌...ಬರಸಾ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

90ರ ದಶಕದಲ್ಲಿ ಬಿಡುಗಡೆಯಾಗಿದ್ದ ಮೊಹರಾ ಸಿನಿಮಾದ ಹಾಡನ್ನು ಸೂರ್ಯವಂಶಿ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಆ ಕಾಲದಲ್ಲಿ ಈ ಹಾಡು ಸೂಪರ್‌ ಹಿಟ್‌ ಆಗಿತ್ತು. ವಿಶೇಷ ಅಂದ್ರೆ ಇದರಲ್ಲಿ ಅಕ್ಷಯ್ ಕುಮಾರ್‌ ಹಾಗೂ ರವಿನಾ ಟಂಡನ್ ನಟಿಸಿದ್ದರು.

ರವಿನಾ ಮತ್ತು ಅಕ್ಷಯ್‌ ಮಳೆಯಲ್ಲಿ ರೋಮ್ಯಾಂಟಿಕ್‌ ಆಗಿ ನೃತ್ಯ ಮಾಡುವ ಟಿಪ್‌ ಟಿಪ್‌ ಹಾಡು ಅಭಿಮಾನಿಗಳಿಗೆ ಇಷ್ಟವಾಗಿತ್ತು. ಆ ಹಾಡಿನಲ್ಲಿ ಹಳದಿ ಸೀರೆ ಧರಿಸಿದ್ದ ರವಿನಾ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದರು.

ಅದೇ ಹಾಡನ್ನು ಬಳಸಿಕೊಂಡಿರುವ ಚಿತ್ರತಂಡ ಕತ್ರಿನಾ ಅವರನ್ನು ಮಳೆಯಲ್ಲಿ ಕುಣಿಸಿದ್ದಾರೆ. ಸ್ವಲ್ಪ ಬದಲಾವಣೆಯೊಂದಿಗೆ ಹಾಡನ್ನು ಯಥಾವತ್ತಾಗಿ ಬಳಸಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು