ಬೆಂಗಳೂರು: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಸಿನಿಮಾ ಪ್ರಾಜೆಕ್ಟ್ #SSMB ಬಗ್ಗೆ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ.

ಇನ್ನೂ ಹೆಸರಿಡ ರಾಜಮೌಳಿ ಅವರ ಹೊಸ ಸಿನಿಮಾದ ಶೀರ್ಷಿಕೆ ಘೋಷಣೆ ಕಾರ್ಯಕ್ರಮ #Globetrotter ನವೆಂಬರ್ 15ರಂದು ಹೈದರಾಬಾದ್ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ನಿಗದಿಯಾಗಿದೆ.

ಇದೊಂದು ಆನ್ನೈನ್ ಕಾರ್ಯಕ್ರಮವಾಗಿದ್ದು ವಿಶೇಷವಾಗಿ ರೂಪುಗೊಂಡಿದೆ. ಜಿಯೋ ಹಾಟ್ ಸ್ಟಾರ್ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು ಜಗತ್ತಿನಾದ್ಯಂತ ಲೈವ್ ಆಗಿ ಕಾರ್ಯಕ್ರಮದಲ್ಲಿ ಸೇರಬಹುದು.

ಈ ಹಿನ್ನೆಲೆಯಲ್ಲಿ ನಟ ಮಹೇಶ್ ಬಾಬು ಅವರು ಕಾರ್ಯಕ್ರಮದ ಬಗ್ಗೆ ಅಧಿಕೃತವಾಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ.

ಮಹೇಶ್ ಬಾಬು ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ನಡೆದಿದ್ದು ನವೆಂಬರ್ 15 ರಂದು ಚಿತ್ರದ ಹೆಸರು ಹಾಗೂ ಇನ್ನಷ್ಟು ರೋಚಕ ಸಂಗತಿಗಳು ಬಹಿರಂಗವಾಗಲಿವೆ ಎನ್ನಲಾಗಿದೆ.

ಆ ಕಾರ್ಯಕ್ರಮದಲ್ಲಿ ರಾಜಮೌಳಿ, ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್, ಪ್ರಿಯಾಂಕ ಚೋಪ್ರಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ವಿಶೇಷ ಎಂದರೆ ಈ ಚಿತ್ರದ ಶೀರ್ಷಿಕೆಯನ್ನು ಹಾಲಿವುಡ್ನ ಅವತಾರ್ ಖ್ಯಾತಿಯ ನಿರ್ದೇಶಕ ಜೇಮ್ಸ್ ಕೆಮರೂನ್ ಅನಾವರಣ ಮಾಡಲಿದ್ದಾರೆ ಎನ್ನಲಾಗಿದೆ.

ರಾಜಮೌಳಿ ಅವರ ತಂದೆ ಎಸ್ಎಸ್ ವಿಜಯೇಂದ್ರ ಪ್ರಸಾದ್ ಅವರ ಕಥೆ ಹೊಂದಿರುವ ಈ ಹೊಸ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಆಫ್ರಿಕಾದ ದಟ್ಟ ಕಾಡುಗಳಲ್ಲಿ ಚಿತ್ರೀಕರಣವಾಗುತ್ತಿದೆ. ಇತ್ತೀಚೆಗೆ ಶೂಟಿಂಗ್ನ ವಿಡಿಯೊ ತುಣಕೊಂದು ಸೋರಿಕೆಯಾಗಿದ್ದು ವೈರಲ್ ಆಗಿದೆ.

ಇನ್ನು, ಮೊನ್ನೆಯಷ್ಟೇ ರಾಜಮೌಳಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಾಗಿರುವ ಕುಂಭನ ಪರಿಚಯವನ್ನು ಮಾಡಿದ್ದರು. ಕುಂಭನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು ತೀವ್ರ ಕುತೂಹಲ ಮೂಡಿಸಿದೆ.
.SS ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್: ಪೋಸ್ಟರ್ ಬಿಡುಗಡೆ.SS ರಾಜಮೌಳಿ-ಮಹೇಶ್ ಬಾಬು ಕಾಂಬಿನೇಷನ್ನ ಹೊಸ ಸಿನಿಮಾ ಹೆಸರು ಘೋಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.