ಬೆಂಗಳೂರು: ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಬಿಲ್ಲ ರಂಗ ಬಾಷಾ–ಫಸ್ಟ್ ಬ್ಲಡ್’ 2026ರ ವರ್ಷಾಂತ್ಯದಲ್ಲಿ ತೆರೆಕಾಣಲಿದೆ ಎಂದಿದ್ದಾರೆ ಸುದೀಪ್.

‘ಈ ಚಿತ್ರದ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಬಳಿಕ ಮಾರ್ಕ್ ಕೈಗೆತ್ತಿಕೊಂಡಿದ್ದೆ. ‘ಬಿಲ್ಲ ರಂಗ ಬಾಷಾ’ ಸಿನಿಮಾ ನಿಂತಿದೆ ಎನ್ನುವ ಮೀಮ್ಗಳು ಸುಳ್ಳು. ಸಿನಿಮಾ ಇನ್ನೂ ದೊಡ್ಡದಾಗಿ ಆಗುತ್ತಿದೆ. ಡಿಸೆಂಬರ್ನಲ್ಲಿ ಇದರ ಚಿತ್ರೀಕರಣಕ್ಕೆ ಮತ್ತೆ ಇಳಿಯಲಿದ್ದೇನೆ. ಇದರಲ್ಲಿ ‘ಬಿಲ್ಲ’ ಎನ್ನುವ ಪಾತ್ರದ ಮೇಕಪ್ಗೇ ಎರಡು ಗಂಟೆ ಹಿಡಿಯುತ್ತಿದೆ. ತೆಗೆಯಲು 25 ನಿಮಿಷ ಹಿಡಿಯುತ್ತಿದೆ. ಇದೊಂದು ಹೊಸ ಲೋಕ’ ಎಂದರು.

ಇದೇ ವೇಳೆ ‘ನನಗೆ ಖುಷಿ ತಂದ ಒಂದು ಕಥೆ ಬರೆದಿದ್ದೇನೆ. ನಿರ್ದೇಶನಕ್ಕೆ ತಯಾರಿ ಆರಂಭವಾಗಿದೆ’ ಎನ್ನುವ ಮೂಲಕ ನಿರ್ದೇಶನದತ್ತ ಗಮನಹರಿಸುತ್ತಿರುವ ಸುಳಿವನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.