ಅಂಬರೀಷ್‌ಗೆ ’ಒಲವಿನ ಉಡುಗೊರೆ’ ನೀಡಿದ ಸುಮಲತಾ

7
ನೆನಪುಗಳಿಗೆ ಅಕ್ಷರ ರೂಪ ನೀಡಿ ಪತಿಯ ನೆನೆದು ಪತ್ರ ಬರೆದರು

ಅಂಬರೀಷ್‌ಗೆ ’ಒಲವಿನ ಉಡುಗೊರೆ’ ನೀಡಿದ ಸುಮಲತಾ

Published:
Updated:

ಬೆಂಗಳೂರು: ಅಂಬರೀಷ್‌ ಮತ್ತು ಸುಮಲತಾ ಅವರ ವಿವಾಹ ವಾರ್ಷಿಕೋತ್ಸವ ಇಂದು. ಅಂಬರೀಷ್‌ ನಮ್ಮೆಲ್ಲರಿಂದ ದೂರವಾಗಿ ಇಂದಿಗೆ 14 ದಿನಗಳು. ಈ ಅಗಲಿಕೆಯ ನೋವಿಗೆ ಅಕ್ಷರ ರೂಪ ನೀಡಿದ ಸುಮಲತಾ, ಪತಿಗೆ ಪತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಅವರಿಬ್ಬರು ಜೊತೆಯಾಗಿರುವ 27 ಫೋಟ್‌ಗಳ ಜೊತೆ ಪ್ರೀತಿ ತುಂಬಿದ ಪತ್ರ ಬರೆದಿರುವ ಸುಮಲತಾ, 27 ವರ್ಷಗಳ ತಮ್ಮ ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. 

'ಮೈ ಡಿಯರೆಸ್ಟ್ ಬಿಲವೆಡ್ ಎ.. ಡಿಸೆಂಬರ್ 8... ಎಂದು ಪತ್ರ ಆರಂಭಿಸಿದ ಸುಮಲತಾ,  27 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನೀವು ನನ್ನ ಪಕ್ಕದಲ್ಲಿಲ್ಲ. ಇದು ನಮ್ಮ ದಿನ. ನೀವೇ ನನ್ನ ಪ್ರಪಂಚವಾಗಿದ್ದಿರಿ. ನನ್ನ ಕೈ ಹಿಡಿದಿರಿ ಮತ್ತು ನನ್ನನ್ನು ಸರಿಯಾಗಿ ನಿಭಾಯಿಸಿದ್ರಿ. ಪ್ರೀತಿಯಿಂದ ಲಕ್ಷಾಂತರ ಜನರನ್ನು ಮುಟ್ಟುತ್ತಿದ್ದ ನಿಮ್ಮ ಹೃದಯ ನನ್ನೊಳಗಿತ್ತು. ನಮ್ಮ ಮದುವೆಯಾಗಿ ನಿಜಕ್ಕೂ 27 ವರ್ಷಗಳಾಗಿದ್ಯಾ. ನೀವು ಪ್ರೀತಿ ಮಾಡಲು ಆರಂಭಿಸಿದ ಬಳಿಕವೇ ನನ್ನ ಜೀವನ ಆರಂಭವಾಗಿದೆ ಎಂದು ನನಗೆ ಅನ್ನಿಸುತ್ತಿದೆ. ನೀವೊಂದು ಮುಗುಳು ನಕ್ಕರೆ ನಾನು ಮಿಂಚುತ್ತೇನೆ. ನೀವು ನನಗೆ ತೋರಿಸುತ್ತಿದ್ದ ಪ್ರೀತಿಗೆ ಯಾವುದು ಸರಿಸಾಟಿಯಾಗಲಾರದು. ನಿಮ್ಮ ಪ್ರೀತಿ ನನ್ನನ್ನು ಬೆಚ್ಚಗಿರಿಸಿತ್ತು. ಈಗ ನೀವು ಎಲ್ಲೇ ಇದ್ದರೂ ನನ್ನನ್ನೇ ನೋಡುತ್ತಿರುತ್ತೀರಿ. ನಮ್ಮ ಮಗ ಬಗ್ಗೆ ಈಗಲೂ ಯೋಚಿಸುತ್ತಿರುತ್ತೀರಿ ಅಲ್ಲದೆ, ನಮ್ಮ ಕಾಳಜಿಯನ್ನೂ ಈಗಲೂ ವಹಿಸಿದ್ದೀರಿ ಎನ್ನುವುದು ನನಗೆ ಗೊತ್ತು. 

ನಿಮ್ಮ ಪ್ರೀತಿ ನಮ್ಮ ಸುತ್ತಲಿರುವ ವ್ಯಕ್ತಿಗಳ ಕಣ್ಣಲ್ಲಿ ಪ್ರತಿಫಲಿಸುತ್ತಿದೆ. ನಿಮ್ಮ ಅಗಲಿಕೆಯಿಂದ ಚಿದ್ರವಾದ ಹೃದಯವನ್ನು ತಹಬದಿಗೆ ತಂದು ಕೊಂಚ ಸಮಾಧಾನ ಮಾಡಿಕೊಂಡು ಮುಂದೆ ನಡೆಯಲು ನನಗೆ ನಿಮ್ಮ ಬೆಂಬಲ ಬೇಕಿದೆ. ನಾನು ಬದುಕಲು ನಿಮ್ಮ ಪ್ರೀತಿ ಬೇಕಿದೆ. ಲಕ್ಷದಲ್ಲಿ ಒಬ್ಬರಾಗಿದ್ದ ಸಿಂಹ ಹೃದಯದ ವ್ಯಕ್ತಿಯ ಜೊತೆ 27 ವರ್ಷ ಬದುಕನ್ನು ಹಂಚಿಕೊಂಡಿರುವುದರ ಬಗ್ಗೆ ಹೆಮ್ಮೆ ಇದೆ’ ಎಂದು ಫೇಸ್‌ಬುಕ್‌ನಲ್ಲಿ ಅಂಬಿಗೆ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 33

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !