ನಟ ಸುಮುಖ ನಟನೆಯ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಸಂಜಯ್ ಕೆ.ಕೆ. ಎಂಬುವವರು ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಸುಮುಖ ಹೀರೊ ಆಗಿದ್ದಾರೆ.

ರಂಗಭೂಮಿಯ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಸುಮುಖ ಮುಂಬೈನಲ್ಲಿ ನಟನೆಯ ತರಬೇತಿ ಪಡೆದವರು. ‘ಫಿಸಿಕ್ಸ್ ಟೀಚರ್’ ಎಂಬ ಸಿನಿಮಾವನ್ನು ನಿರ್ದೇಶಿಸಿ ಮುಖ್ಯಭೂಮಿಕೆಯಲ್ಲಿ ನಟಿಸಿದ ಅವರು, ಬಳಿಕ ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಸುಮುಖ ಇದೀಗ ರಗಡ್ ಲುಕ್ನಲ್ಲಿ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ಅವರ ಜನ್ಮದಿನದಂದು ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ‘ಅವನ ನಿಷ್ಠೆ ತಲೆಬಾಗುವುದಿಲ್ಲ. ಅದು ಜ್ವಾಲೆಯಂತೆ ಹತ್ತಿ ಉರಿಯುತ್ತದೆ’ ಎಂಬ ಅಡಿ ಬರಹ ಈ ಸಿನಿಮಾಗಿದೆ.

ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಸಂಜಯ್ ಕೆ.ಕೆ. ಈ ಸಿನಿಮಾ ಮೂಲಕ ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ ಎಂದಿದೆ ಚಿತ್ರತಂಡ. ಈ ಪ್ರಾಜೆಕ್ಟ್ಗೆ ರಾಯಲ್ ಫೈ ಎಂಟರ್ಟೇನ್ಮೆಂಟ್ ಬಂಡವಾಳ ಹೂಡುತ್ತಿದೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.