ಸೋಮವಾರ, ಆಗಸ್ಟ್ 2, 2021
26 °C
#BlackLivesMatter ಅಭಿಯಾನಕ್ಕೆ ಬೆಂಬಲ

ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡ ತಮನ್ನಾ ಫೋಟೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಿಲ್ಕಿ ಬ್ಯೂಟಿ, ಬಾಹುಬಲಿ ಸುಂದರಿ ತಮನ್ನಾ ಭಾಟಿಯಾ, ತನ್ನ ಸುಂದರ ಮುಖಕ್ಕೆ ಕಪ್ಪು ಬಣ್ಣ ಬಳಿದು ಕೊಂಡಿರುವ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ !

‘ಅರೆ, ತಮನ್ನಾ ಮುಖಕ್ಕೆ ಯಾರು ಮಸಿಬಳಿದವರು ಯಾರು‘ ಎಂದೆಲ್ಲ ಆತಂಕಪಡಬೇಡಿ. ಏಕೆಂದರೆ, ಈ ಫೋಟೊ ಹಂಚಿಕೊಂಡಿರುವುದರ ಹಿಂದೆ ಒಂದು ‘ಸಾಮಾಜಿಕ ಅಭಿಯಾನವನ್ನು‘ ಬೆಂಬಲಿಸುವ  ಉದ್ದೇಶವಿದೆ.

ಅದೇನೆಂದರೆ, ಇತ್ತೀಚೆಗೆ ಅಮೆರಿಕದಲ್ಲಿ ಬಿಳಿ ಪೊಲೀಸರ ದಬ್ಬಾಳಿಕೆಯಿಂದ ಕಪ್ಪುಜನಾಂಗದ ಜಾರ್ಜ್‌ಫ್ಲಾಯ್ಡ್ ಎಂಬುವವರ ಹತ್ಯೆಯಾಯಿತು. ಆ ಕುಟುಂಬಕ್ಕೆ ನ್ಯಾಯಸಿಗಬೇಕೆಂದು ಒತ್ತಾಯಿಸಿ ವಿಶ್ವದಾದ್ಯಂತ ಬಹುದೊಡ್ಡ ಅಭಿಯಾನವೊಂದು ಆರಂಭವಾಗಿದೆ. ತಮನ್ನಾ ಅವರು ತಾವು ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡಿರುವ ಫೋಟೊವನ್ನು ಹಂಚಿಕೊಳ್ಳುವ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗ ಆ ಫೋಟೊ ವೈರಲ್ ಆಗಿದೆ. 

ಆ ಫೋಟೊದಲ್ಲಿ ಕೈಯಿಂದ ತಮ್ಮ ಬಾಯಿಯನ್ನು ಬಿಗಿಹಿಡಿದುಕೊಂಡಿರುವಂತೆ ಕಾಣುತ್ತದೆ. ಈ ಫೋಟೊವನ್ನು ಪೋಸ್ಟ್‌ ಮಾಡಿ ’ನಿಮ್ಮ ಮೌನ ನಿಮ್ಮನ್ನು ಕಾಪಾಡುವುದಿಲ್ಲ. ಪ್ರಾಣಿಯಾಗಲಿ, ಮನುಷ್ಯನಾಗಲಿ ಎಲ್ಲರ ಜೀವ ಅಮೂಲ್ಯ. ಪ್ರಾಣ ಹತ್ಯೆ ಪ್ರಕೃತಿಗೆ ವಿರೋಧ, ಮನುಷ್ಯರಾಗಲು ಕಲಿಯೋಣ, ಪ್ರೀತಿಯಿಂದ ಬದುಕೋಣ‘ ಎಂದು ಬರೆದುಕೊಂಡಿದ್ದಾರೆ.‌

’ನ್ಯಾಯಕ್ಕಾಗಿ ದನಿ ಎತ್ತಿದಕ್ಕೆ ನಿಮಗೆ ಧನ್ಯವಾದಗಳು, ಯಾವುದೇ ವ್ಯಕ್ತಿ ಪ್ರಾಣ ತೆಗೆಯುವ ಕೆಲಸ ಹೇಯವಾದದ್ದು, ಇಂತಹವರಿಗೆ ಶಿಕ್ಷೆಯಾಗಬೇಕು, ನಿಮ್ಮ ನಿಲುವಿನೊಂದಿಗೆ ನಾವೀದ್ದೀವಿ‘ ಎಂದು ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ.  

ಇವರೊಂದಿಗೆ ನಟಿಯಾರದ ತ್ರಿಷಾ ಕೃಷ್ಣನ್‌, ಸಮಂತಾ ಕೂಡ ಈ ಘಟನೆಯನ್ನು ಖಂಡಿಸಿ, ಮೃತ ಜಾರ್ಜ್‌ ಫ್ಲಾಯ್ಡ್‌ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ನಡೆಯುತ್ತಿ ರುವ #BlackLivesMatter , #WakeUpWorld ಹಾಗೂ #JusticeForGeorgeFloyd  ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ, ಪತಿ ನಿಕ್‌ ಜೋನಸ್, ಕರಣ್ ಜೋಹರ್, ಕರೀನಾ ಕಪೂರ್ ಸೇರಿ ಅನೇಕರು ಈ ಘಟನೆಯನ್ನು ಖಂಡಿಸಿ, ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.

ತಮನ್ನಾ ಸದ್ಯ ತಮಿಳಿನ ಎರಡು ಸಿನಿಮಾ ಸೇರಿದಂತೆ ಹಿಂದಿ ಸಿನಿಮಾ ಹಾಗೂ ವೆಬ್ ಸರಣಿಯಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು