ಭಾನುವಾರ, ಆಗಸ್ಟ್ 14, 2022
24 °C

ಹೆಚ್ಚು ರಿಪೋರ್ಟ್ ಆದ ಟ್ರೇಲರ್: ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಲಯನ್ಸ್ ಪ್ರಶಸ್ತಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ತಾಪ್ಸಿ ಪನ್ನು ನಟನೆಯ ಥಪ್ಪಡ್ ಚಿತ್ರದ ಟ್ರೇಲರ್ ಜಗತ್ತಿನಲ್ಲೇ ಅತಿ ಹೆಚ್ಚು ರಿಪೋರ್ಟ್ ಆಗಿದ್ದು, ಕ್ಯಾನ್ಸ್ ಲಯನ್ಸ್ ಸಿಲ್ವರ್ ಪ್ರಶಸ್ತಿ ಪಡೆದುಕೊಂಡಿದೆ.

ಚಿತ್ರದ ನಿರ್ದೇಶದ ಅನುಭವ್ ಸಿನ್ಹಾ ಈ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲೇ ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಪ್ರಶಸ್ತಿ ಬಂದಿರುವುದು ಅತ್ಯಂತ ಹೆಚ್ಚು ಸಂತಸ ತಂದಿದೆ ಎಂದು ಅನುಭವ್ ಸಿನ್ಹಾ ಹೇಳಿದ್ದಾರೆ.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಥಪ್ಪಡ್ ಚಿತ್ರದ ಟ್ರೇಲರ್ 4,00,000 ಅಧಿಕ ಬಾರಿ ರಿಪೋರ್ಟ್ ಆಗಿತ್ತು. ಅಲ್ಲದೆ, ಟ್ರೇಲರ್ ಬಿಡುಗಡೆಯಾದ 26 ಗಂಟೆಗಳಲ್ಲೇ ಅದನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿತ್ತು.

ಈ ಕುರಿತು 2021 ಕ್ಯಾನ್ಸ್ ಲಯನ್ಸ್ ಇಂಟರ್‌ನ್ಯಾಶನಲ್ ಫೆಸ್ಟಿವಲ್ ಆಫ್ ಕ್ರಿಯೇಟಿವಿಟಿ ವೆಬ್‌ಸೈಟ್‌ನಲ್ಲಿ ವಿವರ ಪ್ರಕಟಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು