ಶನಿವಾರ, ಏಪ್ರಿಲ್ 1, 2023
23 °C

ದಳಪತಿ ವಿಜಯ್‌ ಹೊಸ ಸಿನಿಮಾಕ್ಕೆ ತ್ರಿಷಾ ನಾಯಕಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕಾಲಿವುಡ್‌ ಸೂಪರ್ ಹಿಟ್ ಜೋಡಿ 14 ವರ್ಷಗಳ ಬಳಿಕ ಮತ್ತೆ ಒಂದಾಗಿದೆ. ‘ಗಿಲ್ಲಿ’, ‘ಕುರುವಿ’ ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ದಳಪತಿ ವಿಜಯ್‌ ಮತ್ತು ತ್ರಿಷಾ, ದಳಪತಿ 67ನೇ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದಾರೆ. ಸಿನಿಮಾದ ಮುಹೂರ್ತ ನೆರವೇರಿದ್ದು, ಅದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

‘ಮಾಸ್ಟರ್‌’ಎಂಬ ಸೂಪರ್‌ಹಿಟ್‌ ಚಿತ್ರ ನೀಡಿದ್ದ ನಿರ್ದೇಶಕ ಲೋಕೇಶ್‌ ಕನಗರಾಜ್​, ವಿಜಯ್‌ಗೆ ಮತ್ತೊಂದು ಸಿನಿಮಾ ಮಾಡುತ್ತಾರೆಂಬ ಸುದ್ದಿ ಅಧಿಕೃತವಾಗಿತ್ತು. ‘ವಾರಿಸು’ ಗೆಲುವಿನ ಖುಷಿಯಲ್ಲಿರುವ ವಿಜಯ್‌ ತಮ್ಮ ಮುಂದಿನ ಚಿತ್ರವನ್ನು ಆರಂಭಿಸಿದ್ದಾರೆ.  

ಕಮಲ್‌ ಹಾಸನ್‌ ‘ವಿಕ್ರಂ’ ಭರ್ಜರಿ ಯಶಸ್ಸಿನ ನಂತರ ಲೋಕೇಶ್‌ ಮತ್ತೆ ತಮಗೆ ಅವಕಾಶ ನೀಡಿದ್ದ ನಟನಿಗೆ ಸಿನಿಮಾ ಮಾಡುತ್ತಿದ್ದಾರೆ. ಸೆವೆನ್ ಸ್ಕ್ರೀನ್‌ ಸ್ಟುಡಿಯೋ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇದು ಆ್ಯಕ್ಷನ್‌ನೊಂದಿಗೆ ಬಿಗ್‌ಬಜೆಟ್‌ ಚಿತ್ರ ಎಂಬುದರಲ್ಲಿ ಅನುಮಾನವಿಲ್ಲ. 

ವಿಜಯ್‌ ಮತ್ತು ತ್ರಿಷಾ ಜೋಡಿ 'ಗಿಲ್ಲಿ', 'ತಿರುಪ್ಪಾಚಿ', 'ಆದಿ', 'ಕುರುವಿ' ಸಿನಿಮಾಗಳಲ್ಲಿ ನಟಿಸಿತ್ತು. ಒಂದು ಕಾಲಕ್ಕೆ ಕಾಲಿವುಡ್‌ನ ನೆಚ್ಚಿನ ಜೋಡಿಯಾಗಿತ್ತು. 2008ರಲ್ಲಿ ಕುರುವಿ ತೆರೆ ಕಂಡ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು