ಶುಕ್ರವಾರ, ಡಿಸೆಂಬರ್ 3, 2021
24 °C

ಬಾಹ್ಯಾಕಾಶದಲ್ಲಿ ಮೊದಲ ಸಿನಿಮಾ ಚಿತ್ರೀಕರಣ; ರಷ್ಯಾದ ಚಿತ್ರ ತಂಡ‌ ಇಂದು ಭೂಮಿಗೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮಾಸ್ಕೋ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) 12 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ರಷ್ಯಾದ ಚಿತ್ರ ತಂಡ ಭಾನುವಾರ ಭೂಮಿಗೆ ವಾಪಸ್‌ ಆಗಲಿದೆ.

ʼದಿ ಚಾಲೆಂಜ್ʼ ಚಿತ್ರಕ್ಕಾಗಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲು ನಟಿ ಯುಲಿಯಾ ಪೆರಿಸಿಲ್ಡ್‌ (37) ಮತ್ತು ನಿರ್ದೇಶಕ ಲಿಮ್‌ ಶಿಪೆಂಕೊ (38) ಅವರು ಹಿರಿಯ ಗಗನಯಾತ್ರಿ ಅಂಟೊನ್‌ ಕಪ್ಲೆರೊವ್‌ ಅವರೊಂದಿಗೆ ಕಜಕಿಸ್ತಾನದ ಬೈಕೋನೂರ್ ಕಾಸ್ಮೋಡ್ರೋಮ್‌ನಿಂದ ಈ ತಿಂಗಳ ಆರಂಭದಲ್ಲಿ ಐಎಸ್‌ಎಸ್‌ಗೆ ಪ್ರಯಾಣ ಬೆಳೆಸಿದ್ದರು.

49 ವರ್ಷದ ಕಪ್ಲೆರೊವ್‌ ಮತ್ತು ಈಗಾಗಲೇ ಐಎಸ್‌ಎಸ್‌ನಲ್ಲಿದ್ದ ಇಬ್ಬರು ಗಗನಯಾತ್ರಿಗಳು ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಾಗ್ಯೂ, ಚಿತ್ರದ ಕಥೆ ಹಾಗೂ ಬಜೆಟ್‌ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಗಗನ ಯಾತ್ರಿಗಳ ರಕ್ಷಣೆಗಾಗಿ ಐಎಸ್‌ಎಸ್‌ಗೆ ಕಳುಹಿಸಲ್ಪಡುವ ಮಹಿಳಾ ವೈದ್ಯೆಯ ಸುತ್ತ ಕಥೆ ಹೆಣೆಯಲಾಗಿದೆ ಎನ್ನಲಾಗಿದೆ.

ಈ ಯೋಜನೆಯು ಅಷ್ಟೇನು ಸರಳವಾಗಿರಲಿಲ್ಲ. ತಂಡವನ್ನು ಭೂಮಿಗೆ ಕರೆತರುವ ಸೋಯುಜ್‌ ಎಂಎಸ್-18‌ ಬಾಹ್ಯಾಕಾಶ ನೌಕೆಯನ್ನು ರಷ್ಯಾ ವಿಮಾನ ನಿಯಂತ್ರಕರು ಶುಕ್ರವಾರ ಪರೀಕ್ಷೆ ನಡೆಸಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಥ್ರಸ್ಟರ್‌ ಚಾಲನೆಯಾಗಿ ಗಗನನೌಕೆಯು ನುಗ್ಗಿದ ಪರಿಣಾಮ ಐಎಸ್‌ಎಸ್‌ ಸಂಪರ್ಕ 30 ನಿಮಿಷ ಕಡಿತಗೊಂಡಿತ್ತು ಎಂದು ನಾಸಾ ವಕ್ತಾರರು ರಷ್ಯಾ ಸುದ್ದಿ ಸಂಸ್ಥೆ TASSಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು