ಬುಧವಾರ, ಮೇ 18, 2022
27 °C

ಕಾಶ್ಮೀರ್‌ ಫೈಲ್ಸ್‌ ನಿರ್ಮಾಪಕರಿಂದ ಇನ್ನೊಂದು ನೈಜ ಕಥೆ ‘ಟೈಗರ್‌ ನಾಗೇಶ್ವರರಾವ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೈಗರ್‌ ನಾಗೇಶ್ವರರಾವ್‌....

ಇಂದು ಪ್ರಿ ಲುಕ್‌ ಬಿಡುಗಡೆಯಾಗಿರುವ ಹೊಸ ಚಿತ್ರವಿದು. ಹೌದು, ಹೊಸದೊಂದು ಪಾನ್‌ ಇಂಡಿಯಾ ಸಿನಿಮಾ ಈ ಹೆಸರಿನಲ್ಲಿ ಸೆಟ್ಟೇರಿದೆ. ತೆಲುಗಿನ ಮಾಸ್‌ ಮಹಾರಾಜ ರವಿತೇಜ ಈ ಚಿತ್ರಕ್ಕೆ ಬಣ್ಣಹಚ್ಚಲಿದ್ದಾರೆ. ಅಂದ ಹಾಗೆ ಇದು ಅವರ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ. ವಂಶಿ ಅವರು ನಿರ್ದೇಶಕರು. 

‘ಕಾಶ್ಮೀರ್‌ ಫೈಲ್ಸ್‌’ ಚಿತ್ರದ ನಿರ್ಮಾಪಕ ಅಭಿಷೇಕ್‌ ಅಗರ್‌ವಾಲ್‌ ಅವರು ತಮ್ಮ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಅಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರ ತೇಜ್‌ ನಾರಾಯಣ್‌ ಅವರ ಪ್ರಸ್ತುತಿಯಂತೆ.

ಯಾರಿವರು ‘ಟೈಗರ್‌ ನಾಗೇಶ್ವರರಾವ್‌’?

ಟೈಗರ್ ನಾಗೇಶ್ವರ್ ರಾವ್, ಸ್ಟುವರ್ಟ್‌ಪುರಂ ಎಂಬಲ್ಲಿನ ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳ. 1970ರಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಸಂಪೂರ್ಣವಾಗಿ ತಮ್ಮ ಮೇಕ್ ಓವರ್‌ನ್ನು ಬದಲಿಸಿಕೊಂಡಿದ್ದಾರೆ. ಒಂದು ವಿಭಿನ್ನ ಪಾತ್ರದಲ್ಲಿ ರವಿತೇಜ ಮಿಂಚಲಿದ್ದಾರೆ. ಬಾಲಿವುಡ್ ಸುಂದರಿ ಕೃತಿ ಸನೂನ್ ಸಹೋದರಿ ನೂಪೂರ್ ಸನೂನ್ ರವಿತೇಜ್ ಗೆ ಜೋಡಿಯಾಗಿ ಮಿಂಚಲಿದ್ದಾರೆ.

ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. 70ರ ದಶಕದ ಸನ್ನಿವೇಶಗಳ ಜೊತೆಗೆ ಮೈ ಜುಮ್ ಎನಿಸುವ ಸಾಹಸ ದೃಶ್ಯಗಳು ಸಿನಿಮಾದಲ್ಲಿ ಇರಲಿವೆ. ಆರ್.ಮ್ಯಾಥಿ ಐಎಸ್ ಸಿ ಕ್ಯಾಮೆರಾ ವರ್ಕ್, ಜೆ.ವಿ. ಪ್ರಕಾಶ್ ಕುಮಾರದ್ ಸಂಗೀತ, ಶ್ರೀಕಾಂತ್ ವಿಸ್ಸಾ ಸಂಭಾಷಣೆ ಬರೆದಿದ್ದಾರೆ. ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಪಕರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು