ಶನಿವಾರ, ಜುಲೈ 31, 2021
25 °C

ಪ್ರಭಾಸ್‌ 20ನೇ ಚಿತ್ರದ ಟೈಟಲ್‌– ಫಸ್ಟ್‌ಲುಕ್‌ 10ರಂದು ಬಿಡುಗಡೆ

ಪ್ರಜಾವಾಣಿ ಫೀಚರ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಇದು ರೋಮ್ಯಾಂಟಿಕ್‌ ಕಥೆ ಆಧರಿಸಿದ ಸಿನಿಮಾ. ‘ಸಾಹೋ’ ನಂತರ ಈ ಚಿತ್ರದ ಪಾತ್ರಕ್ಕಾಗಿ ಪ್ರಭಾಸ್‌ ಕಠಿಣ ಡಯೆಟ್‌ ಮತ್ತು ವರ್ಕೌಟ್‌ ಮಾಡಿ ತೂಕ ಕಳೆದುಕೊಂಡಿದ್ದರು. ಪ್ರಭಾಸ್‌ – ಪೂಜಾ ಜೋಡಿಯ ಪ್ರಣಯ ಸಲ್ಲಾಪವನ್ನು ತೆರೆಯಮೇಲೆ ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾತರರಾಗಿದ್ದಾರೆ.

ಸಾಲು ಸಾಲು ಹಿಟ್‌ ಸಿನಿಮಾ ನೀಡಿದ ‘ಬಾಹುಬಲಿ’ ಖ್ಯಾತಿ ನಟ ಪ್ರಭಾಸ್‌ ಅವರ 20ನೇ ಸಿನಿಮಾದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಜುಲೈ 10ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಪ್ರಭಾಸ್‌, ಪೂಜಾ ಹೆಗ್ಡೆ ಜತೆಗಿರುವ ವಿಶೇಷ ಪೋಸ್ಟರ್‌ ಅನ್ನು ಅಂದು ಚಿತ್ರತಂಡ ಬಿಡುಗಡೆ ಮಾಡಲಿದೆ.

‘ಸಾಹೋ’ ಚಿತ್ರದ ನಂತರ ಪ್ರಭಾಸ್‌ ಮತ್ತೊಂದು ಬಹು ಭಾಷಾ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಈ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇದು ರೋಮ್ಯಾಂಟಿಕ್‌ ಕಥೆ ಆಧರಿಸಿದ ಸಿನಿಮಾ. ‘ಸಾಹೋ’ ನಂತರ ಈ ಚಿತ್ರದ ಪಾತ್ರಕ್ಕಾಗಿ ಪ್ರಭಾಸ್‌ ಕಠಿಣ ಡಯೆಟ್‌ ಪಾಲಿಸಿ, ವರ್ಕೌಟ್‌ ಕೂಡ ಮಾಡಿ ತೂಕ ಕಳೆದುಕೊಂಡಿದ್ದರು. ಈ ನಡುವೆ ಪ್ರಭಾಸ್‌ ಮತ್ತು ಪೂಜಾ ಜೋಡಿ ಡೇಟಿಂಗ್‌ನಲ್ಲಿದೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಬಲವಾಗಿ ಹರಿದಾಡುತ್ತಿದೆ. ಈ ಚಿತ್ರ ಇಬ್ಬರನ್ನೂ ಇನ್ನಷ್ಟು ಹತ್ತಿರಗೊಳಿಸಿತು ಎನ್ನುವ ಮಾತಿಗೆ ‘ಪೂಜಾ ಕನಸಿನ ಹುಡುಗ ಪ್ರಭಾಸ್‌ ಅಲ್ಲದೇ ಬೇರೆ ಯಾರೂ ಆಗಿರಲು ಸಾಧ್ಯವಿಲ್ಲ’ ಎಂಬ ಆಕೆಯ ಅಭಿಮಾನಿಗಳ ತರ್ಕವು ಪುಷ್ಠಿ ನೀಡುವಂತಿದೆ.

ಟೈಟಲ್‌ ಮತ್ತು ಫಸ್ಟ್‌ ಲುಕ್‌ ಬಿಡುಗಡೆ ಮಾಹಿತಿಯನ್ನು ಪ್ರಭಾಸ್‌ ಮತ್ತು ಪೂಜಾ ಹೆಗ್ಗೆಯೂ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

ಟಿ– ಸಿರೀಸ್‌, ಯುವಿ ಕ್ರಿಯೇಶನ್ಸ್‌ ಹಾಗೂ ಗೋಪಿ ಕೃಷ್ಣ ಚಿತ್ರಕ್ಕೆ ಬಂಡವಾಳ ಹೂಡಿದೆ. ಚಿತ್ರದ ಶೇ 55ರಷ್ಟು ಚಿತ್ರೀಕರಣ ಕೊರೊನಾ ಪೂರ್ವದಲ್ಲೇ ಆಗಿದೆ. ಬಾಕಿ ಚಿತ್ರೀಕರಣ ಇನ್ನಷ್ಟೇ ನಡೆಯಬೇಕಿದೆ.

ಈ ಮೊದಲು ಜುಲೈ 22ರಂದು ಸಿನಿಮಾದ ಟೈಟಲ್‌ ಘೋಷಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಈಗ ಹನ್ನೆರಡು ದಿನ ಮುಂಚಿತವಾಗಿಯೇ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡು, ಅಭಿಮಾನಿಗಳ ದಿನಗಣನೆಯ ಲೆಕ್ಕವನ್ನು ಕಡಿಮೆ ಮಾಡಿದೆ. ಈ ಚಿತ್ರದ ಟೈಟಲ್‌ ‘ರಾಧೆ ಶ್ಯಾಮ್’ ಅಥವಾ ‘ಓಹ್‌ ಡಿಯರ್’ ಅಥವಾ ‘ಜಾನ್’‌‌ ಇರಬಹುದೇ ಎಂಬ ಅಭಿಮಾನಿಗಳ ಕುತೂಹಲಕ್ಕೂ ಅಂದು ತೆರೆಬೀಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು