ಶನಿವಾರ, ಸೆಪ್ಟೆಂಬರ್ 26, 2020
23 °C

ಅಲ್ಲು ಅರ್ಜುನ್‌ ಹೊಸ ಸಿನಿಮಾಕ್ಕೆ ಕೊರಟಾಲ ಶಿವ ಆ್ಯಕ್ಷನ್‌ ಕಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ನಿರ್ದೇಶಕ ಕೊರಟಾಲ ಶಿವ ಮತ್ತು ನಟ ಅಲ್ಲು ಅರ್ಜುನ್ ಕಾಂಬಿನೇಷನ್‌ನಡಿ ಹೊಸ ಸಿನಿಮಾ ಘೋಷಣೆಯಾಗಿದೆ. ಇದರ ಟೈಟಲ್‌ ಇನ್ನೂ ಅಧಿಕೃತಗೊಂಡಿಲ್ಲ.

ಪ್ರಸ್ತುತ ಅಲ್ಲು ಅರ್ಜುನ್ ‘ರಂಗಸ್ಥಳಂ’ ಚಿತ್ರದ ಖ್ಯಾತಿಯ ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರಿಗೆ ಕನ್ನಡತಿ ರಶ್ಮಿಕಾ ಮಂದಣ್ಣ ಜೋಡಿ. ಈ ಸಿನಿಮಾ ಪೂರ್ಣಗೊಂಡ ಬಳಿಕ ಹೊಸ ಸಿನಿಮಾ ಸೆಟ್ಟೇರಲಿದೆಯಂತೆ.

ಜಿಎ2 ಪಿಕ್ಚರ್‌ ಮತ್ತು ಯುವಸುಧಾ ಆರ್ಟ್ಸ್‌ ಬ್ಯಾನರ್ಸ್‌ನಡಿ ನಿರ್ಮಾಣವಾಗಲಿರುವ ಈ ಸಿನಿಮಾದ ಶೂಟಿಂಗ್‌ 2021ರಿಂದ ಶುರುವಾಗಲಿದೆ. 2022ರ ಸಂಕ್ರಾಂತಿಗೆ ಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿದೆ. ಬಂಟಿ ನಟನೆಯ ಇದು 21ನೇ ಚಿತ್ರ. ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ನಡಿ ಸಿನಿಮಾ ನಿರ್ಮಾಣವಾಗಲಿದೆ.

ಈ ಹೊಸ ಚಿತ್ರದ ಪೋಸ್ಟರ್‌ ವಿಭಿನ್ನವಾಗಿದೆ. ಕೊರಟಾಲ ಶಿವ ಮತ್ತು ಅಲ್ಲು ಅರ್ಜುನ್‌ ಅವರು ಗ್ರಾಮವೊಂದರ ಮುಂದೆ ನಿಂತಿದ್ದಾರೆ. ಅವರು ನದಿ ದಂಡೆಯ ಮೇಲೆ ನಿಂತು ವೀಕ್ಷಿಸುತ್ತಿದ್ದಾರೆ. ಅವರ ಪಕ್ಕದಲ್ಲಿ ದೋಣಿಯೊಂದು ಇದೆ. ಈ ಭಯಾನಕವಾದ ಪೋಸ್ಟರ್ ಚಿತ್ರದ ಕಥೆಯ ಮೇಲೆ ನಿರೀಕ್ಷೆ ಹೆಚ್ಚಿಸಿದೆ. 

‘ಕೊರಟಾಲ ಶಿವ ಅವರೊಟ್ಟಿಗೆ ನನ್ನ ಹೊಸ ಸಿನಿಮಾ #AA21 ಅನ್ನು ಅನೌನ್ಸ್‌ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಅಲ್ಲು ಅರ್ಜುನ್‌ ಟ್ವೀಟ್ ಮಾಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು