ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಶ್ ಬಾಬು ಜತೆ ರಾಜಮೌಳಿ ಹೊಸ ಸಿನಿಮಾ: ಚಿತ್ರಕಥೆ ಬಗ್ಗೆ ನಿರ್ದೇಶಕ ಹೇಳಿದ್ದೇನು?

Last Updated 9 ಏಪ್ರಿಲ್ 2022, 9:29 IST
ಅಕ್ಷರ ಗಾತ್ರ

ಹೈದರಾಬಾದ್: ಟಾಲಿವುಡ್‌ನ ‘ಪ್ರಿನ್ಸ್’ ಎಂದೇ ಗುರುತಿಸಿಕೊಂಡಿರುವ ನಟ ಮಹೇಶ್‌ ಬಾಬು ಹಾಗೂ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಇದೇ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಈ ಕುರಿತು ಸಂದಶರ್ನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ಮಹೇಶ್ ಬಾಬು ಅವರ ಜತೆಗಿನ ಮುಂದಿನ ಸಿನಿಮಾದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜತೆಗೆ ಮಹೇಶ್‌ಗಾಗಿ ವಿಭಿನ್ನ ಕಥಾಹಂದರವಿರುವ ಎರಡು ಕಥೆಗಳನ್ನು ಸಿದ್ಧಪಡಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.

ಕೋವಿಡ್‌ನಿಂದಾಗಿ ‘ಆರ್‌ಆರ್‌ಆರ್‌’ ಸಿನಿಮಾ ಚಿತ್ರೀಕರಣ ಮುಂದೂಲ್ಪಟ್ಟ ಸಂದರ್ಭದಲ್ಲಿ ನನ್ನ ತಂದೆ ವಿಜಯೇಂದ್ರ ಪ್ರಸಾದ್ ಅವರು ಮನೆಯಲ್ಲಿ ಸುಮ್ಮನೆ ಇರುವ ಸಮಯದಲ್ಲಿ ಚಿತ್ರಕಥೆಗಳ ಕುರಿತು ಯೋಚಿಸುವಂತೆ ಸಲಹೆ ನೀಡಿದ್ದರು. ಆಗ ಹೊಸ ಸಿನಿಮಾ ಕುರಿತು ಆಲೋಚಿಸಲು ಆರಂಭಿಸಿದ್ದೆ. ಈಗ ಎರಡು ಕಥೆಗಳು ಸಿದ್ಧವಿದ್ದು, ಮಹೇಶ್‌ ಬಾಬು ನಟನೆಗೆ ಸೂಕ್ತ ಎನಿಸುತ್ತದೆ ಎಂದು ರಾಜಮೌಳಿ ಹೇಳಿಕೊಂಡಿದ್ದಾರೆ.

ವರ್ಷಾಂತ್ಯದ ವೇಳೆ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಾಗುವುದು ಎಂದು ರಾಜಮೌಳಿ ಖಚಿತಪಡಿಸಿದ್ದಾರೆ.

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಇತ್ತೀಚೆಗೆ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ₹1000 ಕೋಟಿಗೂ ಹೆಚ್ಚು ಹಣ ಗಳಿಸಿದೆ.

ಓದಿ...ಹಿಂದಿ ಸಿನಿಮಾದಲ್ಲಿ ನಟಿಸುವ ಅಗತ್ಯ ನನಗಿಲ್ಲ: ಮಹೇಶ್ ಬಾಬು ಹೀಗೆ ಹೇಳಿದ್ದು ಯಾಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT