ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀರ್‌ ಖಾನ್‌ | ‘ಲಾಲ್ ಸಿಂಗ್ ಛಡ್ಡಾ‘ ಟ್ರೈಲರ್: ನೆಟ್ಟಿಗರ ಪ್ರತಿಕ್ರಿಯೆ ಏನು?

Last Updated 31 ಮೇ 2022, 10:11 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ‘ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಟ್ರೈಲರ್ ವೀಕ್ಷಣೆ ಮಾಡಿರುವ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.ಸಿನಿಮಾ ಸಾಕ್ಷ್ಯಚಿತ್ರದಂತೆಇರಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದುಆಸ್ಕರ್‌ ಅಂಗಳಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.

ಇದು ಆರ್‌ಆರ್‌ಆರ್, ಕೆ.ಜಿ.ಎಫ್‌–2ನಂತೆ ಬಾಕ್ಸ್‌ ಆಫೀಸಿನಲ್ಲಿಸದ್ದು ಮಾಡುವುದಿಲ್ಲ ಎಂದು ಯುಟ್ಯೂಬ್‌ನಲ್ಲಿಟ್ರೈಲರ್ ವೀಕ್ಷಿಸಿ ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಈ ಸಿನಿಮಾದಟ್ರೈಲರ್ ಬಿಡುಗಡೆಯಾಗಿ 2 ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.ಆಗಸ್ಟ್ 11ರಂದು ಸಿನಿಮಾ ತೆರೆಕಾಣಲಿದೆ.

ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಭಾನುವಾರ ನಡೆದ ಟಾಟಾ ಐಪಿಎಲ್ 2022 ಫೈನಲ್ ಪಂದ್ಯದ ನಡುವಿನ ಟೈಮ್‌ಔಟ್ ಅವಧಿಯಲ್ಲಿ ಲಾಲ್ ಸಿಂಗ್ ಛಡ್ಡಾ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು.

1994ರಲ್ಲಿ ತೆರೆಕಂಡ ಆಸ್ಕರ್ ಪ್ರಶಸ್ತಿ ಪುರಸ್ಕೃತ, ಹಾಲಿವುಡ್‌ ಚಿತ್ರ ‘ಫಾರೆಸ್ಟ್ ಗಂಪ್’ನಿಂದ ಸ್ಫೂರ್ತಿ ಪಡೆದು ‘ಲಾಲ್‌ ಸಿಂಗ್‌ ಛಡ್ಡಾ’ ಸಿನಿಮಾ ನಿರ್ಮಾಣ ಮಾಡಲಾಗಿದೆ. ‘ಸಿಕ್ರೇಟ್‌ ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕ ಅದ್ವೈತ್ ಚಂದನ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ. ಆಮಿರ್ ಖಾನ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಪ್ರೀತಮ್‌ ಸಂಗೀತ ನಿರ್ದೇಶನ ಮಾಡಿದ್ದು, ಅಮಿತಾಭ್‌ ಭಟ್ಟಾಚಾರ್ಯ ಸಾಹಿತ್ಯ ರಚಿಸಿದ್ದಾರೆ. ವಯಾಕಾಮ್‌ 18 ಸ್ಟುಡಿಯೋಸ್‌ ಮತ್ತು ಆಮೀರ್‌ ಪ್ರೊಡಕ್ಷನ್ಸ್ ಈ ಚಿತ್ರ ನಿರ್ಮಾಣ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT