ನಟ ಅರ್ಬಾಜ್ ಖಾನ್ ನಿರೂಪಕರಾಗಿ ನಡೆಸುತ್ತಿರುವ ಶೋ ಒಂದರಲ್ಲಿ ಸಲ್ಮಾನ್ ಖಾನ್ ಅವರು ನೀಡಿರುವ ಹೇಳಿಕೆಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅರ್ಬಾಜ್ ಖಾನ್ ನಡೆಸಿಕೊಡುತ್ತಿರುವ 'ಪಿಂಚ್' ಎಂಬ ಟಾಕ್ ಶೋದಲ್ಲಿ ಸಲ್ಮಾನ್ ಖಾನ್ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಎಪಿಸೋಡ್‌ನ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ನೀಡಿರುವ ಪ್ರತಿಕ್ರಿಯೆಗಳು ವೈರಲ್ ಆಗಿವೆ.

ಆನ್‌ಲೈನ್ ಟ್ರೋಲಿಂಗ್ ಮತ್ತು ಸಾಮಾಜಿಕ ಮಾಧ್ಯಮಗಳು ಬೀರುವ ದುಷ್ಪರಿಣಾಮದ ಬಗ್ಗೆ ಸಲ್ಮಾನ್ ಖಾನ್ ಹಾಸ್ಯಭರಿತವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್‌ರನ್ನು ಟ್ರೋಲ್ ಮಾಡಿ ಹಾಕಲಾಗಿರುವ ಕಾಮೆಂಟ್‌ಗಳನ್ನು ಅರ್ಬಾಜ್ ಓದಿ ಹೇಳಿದ್ದಾರೆ.

'ನೀವು ಸಾಧಾರಣ ಚಿತ್ರಗಳನ್ನೂ ನೀಡಿದರೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸುತ್ತೀರಿ. ಈಗಾಗಲೇ ಉನ್ನತ ಮಟ್ಟದ ಜೀವನಕ್ರಮವನ್ನು ನಿಮ್ಮದಾಗಿಸಿಕೊಂಡಿದ್ದೀರಿ. ನಮ್ಮ ಹಣವನ್ನು ಯಾವಾಗ ಮರಳಿಸುತ್ತೀರಿ? ಎಂದು ಸಲ್ಮಾನ್‌ಗೆ ಪ್ರಶ್ನಿಸಲಾಗಿದೆ.

ಅದಕ್ಕೆ ಉತ್ತರಿಸಿರುವ ಸಲ್ಮಾನ್, 'ನಾನು ಹಣವನ್ನು ಕದ್ದಿಲ್ಲ. ಆದರೆ, ಬಹುಶಃ ಹೃದಯಗಳನ್ನು ಕದ್ದಿರಬಹುದು' ಎಂದಿದ್ದಾರೆ.

'ನಿಮ್ಮದು ಕೇವಲ ಶೋ-ಆಫ್ ನಟನೆ' ಎಂದು ಸಲ್ಮಾನ್‌ಗೆ ಮತ್ತೊಬ್ಬ ನೆಟ್ಟಿಗರು ಕುಟುಕಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್, 'ಶೋ-ಆಫ್ ನಟನೆಗೆ ಧೈರ್ಯ ಮತ್ತು ದೊಡ್ಡ ಹೃದಯವಿರಬೇಕು' ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.