ಗುರುವಾರ , ಮಾರ್ಚ್ 30, 2023
32 °C

ದೀಪಾವಳಿ ಆಚರಿಸಿದ ಫರ್ಹಾನ್: ಹಿಂದುಗಳ ಹಬ್ಬ ಆಚರಿಸಿದ್ದು ತಪ್ಪು ಎಂದ ನೆಟ್ಟಿಗರು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್​ ನಟ ಫರ್ಹಾನ್​ ಅಖ್ತರ್​ ಅವರು ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

‘ಮುಸ್ಲಿಂ ಧರ್ಮದವರಾದ ಫರ್ಹಾನ್​ ಅಖ್ತರ್​ ಅವರು ಹಿಂದುಗಳ ದೀಪಾವಳಿ ಹಬ್ಬವನ್ನು ಆಚರಿಸಿದ್ದು ಸರಿಯಲ್ಲ’ ಎಂಬುದು ಕೆಲವರು ವಾದಿಸಿದ್ದಾರೆ. ಇದೇ ಕಾರಣಕ್ಕೆ ಫರ್ಹಾನ್‌ ಅವರನ್ನು ಟ್ರೋಲ್‌ ಮಾಡಲಾಗಿದೆ.

ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಫರ್ಹಾನ್​ ಅಖ್ತರ್​ ಕೂಡ ತಮ್ಮ ಕಚೇರಿಯಲ್ಲಿ ಪ್ರೇಯಸಿ ಶಿಬಾನಿ ದಂಡೇಕರ್​ ಸೇರಿದಂತೆ ಸ್ನೇಹಿತರೊಂದಿಗೆ ದೀಪಾವಳಿವನ್ನು ಆಚರಿಸಿದ್ದಾರೆ. ಹಿಂದುಗಳ ಹಬ್ಬವನ್ನು ಫರ್ಹಾನ್​ ಅಖ್ತರ್​ ಆಚರಿಸಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಫರ್ಹಾನ್​ ಅಖ್ತರ್​  ಅವರ ಅಪ್ಪ ಜಾವೇದ್​ ಅಖ್ತರ್ ಯಾವ ಧರ್ಮವನ್ನೂ ನಂಬುವುದಿಲ್ಲ. ಆದರೆ, ಇವನು ಡ್ರಾಮಾ ಮಾಡುತ್ತಿದ್ದಾನೆ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ‘ಒಬ್ಬ ಮುಸಲ್ಮಾನನಾಗಿ ನೀನು ಮಾಡುತ್ತಿರುವುದೇನು?, ‘ಈತ ಹೆಸರಿಗೆ ಮಾತ್ರ ಮುಸಲ್ಮಾನ’ ಎಂದು ಅನೇಕರು ವ್ಯಂಗ್ಯವಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು