ಮಂಗಳವಾರ, ಜೂಲೈ 7, 2020
29 °C

ವರಲಕ್ಷ್ಮಿಯ ‘ಡ್ಯಾನಿ’ ಓಟಿಟಿಯಲ್ಲಿ ಬಿಡುಗಡೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಬಹುಭಾಷಾ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ ನಟಿಸಿರುವ ತಮಿಳಿನ ‘ಡ್ಯಾನಿ’ ಸಿನಿಮಾ ಇದೇ ಆಗಸ್ಟ್‌ 1ರಂದು ಓಟಿಟಿ ವೇದಿಕೆಯಲ್ಲಿ ನೇರ ಬಿಡುಗಡೆಯಾಗುತ್ತಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳ ಬಾಗಿಲು ಬಂದ್‌ ಆಗಿರುವುದರಿಂದ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಪರ್ಯಾಯ ಮಾರ್ಗಗಳ ಮೊರೆ ಹೋಗಿರುವುದು ಹೊಸ ಸಂಗತಿ ಏನಲ್ಲ. 

ಜೀ5 ಓಟಿಟಿ ವೇದಿಕೆಯಲ್ಲಿ 'ಡ್ಯಾನಿ’ ಚಿತ್ರ ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. 

ಸಾಹಸ ಪ್ರಧಾನವಾದ ಈ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್‌ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರಂತೆ.

ಈ ಚಿತ್ರಕ್ಕೆ ಎಲ್‌.ಎಸ್‌. ಶಾಂತನಮೂರ್ತಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಯೋಗಿ ಬಾಬು ಮತ್ತು ವೇಲ ರಾಮಮೂರ್ತಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸಂಗೀತ ನಿರ್ದೇಶ ಸಂತೋಷ್‌ ದಯಾನಿಧಿ ಅವರದು. ಪಿ.ಜಿ. ಮುತ್ತಯ್ಯ ಮತ್ತು ದೀಪಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

ಕನ್ನಡದ ರನ್ನ, ಮಾಣಿಕ್ಯ, ವಿಸ್ಮಯ ಚಿತ್ರಗಳಲ್ಲಿ ವರಲಕ್ಷ್ಮಿ ಶರತ್ ಕುಮಾರ್ ನಟಿಸಿದ್ದು, ಕನ್ನಡದ ಸಿನಿರಸಿಕರಿಗೂ ಚಿರಪರಿಚಿತೆ. ಸದ್ಯ ವರಲಕ್ಷ್ಮಿ ಅವರ ಕೈಯಲ್ಲಿ ತೆಲುಗಿನ ‘ನಾಂದಿ’, ‘ಕ್ರ್ಯಾಕ್‌’, ತಮಿಳಿನ ‘ಕಾಟೆರಿ’, ‘ಕಣ್ಣಿ ರಾಶಿ’ ‘ಪಂಬನ್‌’, ‘ಚೇಸಿಂಗ್’ ಸಿನಿಮಾಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು