ಬಾಲಿವುಡ್ ನಟ ವಿದ್ಯುತ್ ಜಮ್ಮ್‌ವಾಲ್ ಹಾಗೂ ರೂಪದರ್ಶಿ ನಂದಿತಾ ಮೆಹತಾನಿ ಅವರ ನಡುವಿನ ಡೇಟಿಂಗ್ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೊವನ್ನು ನಂದಿತಾ ಹಂಚಿಕೊಂಡಿದ್ದಾರೆ. ನಂದಿತಾ ಬೆರಳಲ್ಲಿ ವಜ್ರದ ಉಂಗುರ ಇರುವುದು ಕೂಡ ಚಿತ್ರದಲ್ಲಿ ಕಾಣುತ್ತದೆ. ಹಾಗಾಗಿ ಅಭಿಮಾನಿಗಳು ವಿದ್ಯುತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಬಲವಾಗಿ ನಂಬಿದ್ದಾರೆ.
ಇತ್ತ ನಟ ನೇಹಾ ಕೂಡ ಅದೇ ಫೋಟೊವನ್ನು ಶೇರ್ ಮಾಡಿ 'ಒಳ್ಳೆಯ ಸುದ್ದಿ ಕೇಳಿದೆ, ಅಭಿನಂದನೆಗಳು' ಎಂದು ಹೇಳಿದ್ದಾರೆ. ಇದನ್ನು ಗಮನಿಸಿದ್ದಾರೆ ವಿದ್ಯುತ್ ಹಾಗೂ ನಂದಿತಾ ನಿಶ್ಚಿತಾರ್ಥ ಮಾಡಿಕೊಂಡಿರುವುದು ಪಕ್ಕ ಎಂದು ಬಾಲಿವುಡ್‌ನಲ್ಲಿ ಸದ್ಯ ಕೇಳಿ ಬರುತ್ತಿರುವ ಮಾತಾಗಿದೆ.
ಇತ್ತೀಚೆಗೆ ವಿದ್ಯುತ್ ಹೊಸ ಸಿನಿಮಾ ಸಂಸ್ಥೆ ಹಾಗೂ ಸ್ಟುಡಿಯೊವನ್ನು ಸ್ಥಾಪಿಸಿದ್ದಾರೆ. ಇದರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಂದಿತಾ ಕೂಡ ಭಾಗವಹಿಸಿದ್ದರು. ಈ ಸಮಾರಂಭ ಮುಗಿದ ಬಳಿಕ ವಿದ್ಯುತ್ ಹಾಗೂ ನಂದಿತಾ ಆಗ್ರಾಗೆ ಹೋಗಿದ್ದರು. ತಾಜ್ ಮಹಲ್ ಎದುರು ಫೋಟೊ ತೆಗೆಸಿಕೊಂಡಿದ್ದರು. ಈ ಚಿತ್ರಗಳನ್ನು ನಂದಿತಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಆದಾಗ್ಯೂ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಅವರ ಕುಟುಂಬದವರು ಕೂಡ ದೃಢಪಡಿಸಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.