ಕಾಲಿವುಡ್ನ ಖ್ಯಾತ ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಮಾಸ್ಟರ್’ ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಗಾಳಿಸುದ್ದಿ ಕೆಲ ದಿನಗಳಿಂದ ಹರಡಿತ್ತು. ಆದರೆ ಈ ವಿಷಯಕ್ಕೆ ಪೂರ್ಣವಿರಾಮ ಹಾಕಿರುವ ನಿರ್ಮಾಪಕರು ಸಿನಿಮಾವನ್ನು ಥಿಯೇಟರ್ನಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಕೊರೊನಾ ಕಾರಣದಿಂದಾಗಿ ಒಂದಷ್ಟು ದಿನಗಳ ಕಾಲ ಬಾಗಿಲು ಮುಚ್ಚಿದ ಥಿಯೇಟರ್ಗಳು ಪುನರಾರಂಭಗೊಂಡಿವೆ. ಈಗಾಗಲೇ ಕೆಲ ಸಿನಿಮಾಗಳು ಥಿಯೇಟರ್ನಲ್ಲಿ ಬಿಡುಗಡೆಯಾಗಿವೆ ಕೂಡ. ಇದರಿಂದ ಚಿತ್ರೋದ್ಯಮಕ್ಕೆ ಮರುಜೀವ ಬಂದಂತಾಗಿರುವುದು ಸುಳ್ಳಲ್ಲ.

‘ಕೊರೊನಾ ಸಾಂಕ್ರಾಮಿಕ ರೋಗದಿಂದ ನಷ್ಟ ಅನುಭವಿಸಿರುವ ಚಿತ್ರೋದ್ಯಮಕ್ಕೆ ಪುನರುಜ್ಜೀವನ ನೀಡುವ ಸಲುವಾಗಿ ಮಾಸ್ಟರ್ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಣಯಿಸಲಾಗಿದೆ’ ಎಂದಿದ್ದಾರೆ ಸಿನಿಮಾದ ನಿರ್ಮಾಪಕರು.

ಕೊರೊನಾ ಕಾರಣದಿಂದ ಮಾಸ್ಟರ್ ಸಿನಿಮಾದ ಬಿಡುಗಡೆ ಸಾಧ್ಯವಾಗಿರಲಿಲ್ಲ. ಅಲ್ಲದೇ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಾರೆ ಎಂಬ ಊಹಾಪೋಹಗಳು ಕಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಆದರೆ ನಿರ್ಮಾಪಕರು ಥಿಯೇಟರ್ ಪುನಾರಂಭವಾಗಿ ಕೊಂಚ ಸಹಜಸ್ಥಿತಿಗೆ ಮರಳುವ ಸಲುವಾಗಿ ಕಾಯುತ್ತಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿಯೂ ಇದೆ ಚಿತ್ರತಂಡ.

ಮಾಸ್ಟರ್ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿದ್ದು ವಿಜಯ್ಗೆ ಎದುರಾಳಿಯಾಗಿ ವಿಜಯ್ ಸೇತುಪತಿ ನಟಿಸಲಿದ್ದಾರೆ. ಮಾಳವಿಕಾ ಮೋಹನನ್ ಹಾಗೂ ಅರ್ಜುನ್ ದಾಸ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.