ಶನಿವಾರ, ಜೂನ್ 25, 2022
25 °C

ಸಲಾರ್‌ | ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್: ಯಶ್‌ ಬಳಿಕ ಈಗ ಪ್ರಭಾಸ್ ಡೈಲಾಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಜಿ.ಎಫ್.–2 ಚಿತ್ರದ ರಾಕಿಂಗ್‌ ಸ್ಟಾರ್‌ ಯಶ್‌ ಡೈಲಾಗ್‌, ವೈಲೆನ್ಸ್... ವೈಲೆನ್ಸ್... ವೈಲೆನ್ಸ್ ಎಲ್ಲೆಡೆ ವೈರಲ್ ಆಗಿರುವುದು ಸಿನಿಮಾ ಪ್ರಿಯರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದೇ ಸಂಭಾಷಣೆ ‘ಸಲಾರ್‌‘ ಚಿತ್ರದ ಮೂಲಕ ನಟ ಪ್ರಭಾಸ್ ಬಾಯಲ್ಲೂ ಮುಂದುವೆರೆಯಲಿದೆ...

ಈ ಮಾತಿಗೆ ಸಲಾರ್‌ ಚಿತ್ರದ ಹೊಸ ಪೋಸ್ಟರ್‌ ಪುಷ್ಠಿ ಕೊಟ್ಟಿದೆ. ಸಲಾರ್‌ ಪೋಸ್ಟರ್‌ನಲ್ಲಿ ಪ್ರಭಾಸ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ವೈಲೆನ್ಸ್ ಡೈಲಾಗ್‌ಗಳು ಕಾಣಿಸಿಕೊಂಡಿರುವುದರಿಂದ ಚಿತ್ರದಲ್ಲಿ ವೈಲೆನ್ಸ್ ಡೈಲಾಗ್‌ಗಳು ಮುಂದುವರೆಯಲಿವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಸಲಾರ್’ ದೇಶದಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಯ ಈ ವೈಲೆನ್ಸ್ ಸಂಭಾಷಣೆ ‘ಸಲಾರ್‌‘ನಲ್ಲೂ ಮುಂದುವರೆಯಲಿದೆ. 

ಈಗಾಗಲೇ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದ್ದು, ಚಿತ್ರೀಕರಣದ ಕೆಲಸಗಳು ನಡೆಯುತ್ತಿವೆ. ಮುಹೂರ್ತ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ದಂಡೇ ಸೇರಿತ್ತು. ರಾಜ್ಯದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್, ‘ರಾಕಿಂಗ್ ಸ್ಟಾರ್’ ಯಶ್, ಟಾಲಿವುಡ್‌ನ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ವಿಜಯ್ ಕಿರಗಂದೂರು ಭಾಗವಹಿಸಿದ್ದರು.

ಟಾಲಿವುಡ್‌ನ ಖ್ಯಾತನಟ ಪ್ರಭಾಸ್‌ ನಟನೆಯ ಚಿತ್ರವಿದು. ಫಸ್ಟ್ ಲುಕ್, ಪೋಸ್ಟರ್ ಮೂಲಕವೇ ‘ಸಲಾರ್’ ಚಿತ್ರ ಈಗಾಗಲೇ ದೇಶವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲವನ್ನು ಕೆರಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು