ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸ್‌ ಆಫೀಸ್‌ ಸದ್ದು: ₹ 300 ಕೋಟಿ ಗಳಿಸಿದ ‘ವಾರ್‌‘

Last Updated 21 ಅಕ್ಟೋಬರ್ 2019, 7:08 IST
ಅಕ್ಷರ ಗಾತ್ರ

ಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶ್ರಾಫ್‌ ಅಭಿನಯದ ‘ವಾರ್‌’ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ₹ 300 ಕೋಟಿ ಗಳಿಸಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮಾಡುತ್ತಿರುವ ವಾರ್‌,ಚಿತ್ರ ಬಿಡುಗಡೆಯಾದ ಮೊದಲ ದಿನವೇ ₹ 52 ಕೋಟಿ ಕಲೆಕ್ಷನ್‌ ಮಾಡಿತ್ತು. ಐದು ದಿನಗಳಲ್ಲಿ ₹150 ಕೋಟಿಗಿಂತಲೂ ಹೆಚ್ಚು ಗಳಿಕೆ ಮಾಡಿತ್ತು.

ಚಿತ್ರ ಬಿಡುಗಡೆಯಾದ 19 ದಿನದಲ್ಲೇ ಇತಿಹಾಸ ನಿರ್ಮಿಸಿದ ಹೆಗ್ಗಳಿಕೆಗೂ ‘ವಾರ್‌‘ ಪಾತ್ರವಾಗಿದೆ. 2019ರಲ್ಲಿ ₹ 300 ಕೋಟಿ ಗಳಿಸಿದ ಮೊದಲ ಚಿತ್ರ ಇದಾಗಿದೆ. ಈ ಮೂಲಕ ’ವಾರ್‌ 2‘ರ ಮೇಲೂ ನಿರೀಕ್ಷೆಗಳನ್ನು ಹುಟ್ಟುಹಾಕಿದೆ ಎಂದುಸಿನಿಮಾ ವಿಶ್ಲೇಷಕ ತರಣ್ ಆದರ್ಶ್‌ ಅವರು ವಿಶ್ಲೇಷಿಸಿದ್ದಾರೆ.

ಸಿನಿಮಾದಲ್ಲಿ ಹೃತಿಕ್‌ ಹಾಗೂ ಟೈಗರ್‌ ಶ್ರಾಫ್‌ ಅಭಿನಯಕ್ಕೆ ಎಲ್ಲೆಡೆ ಉತ್ತಮ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.

ಟೈಗರ್‌ ಶ್ರಾಫ್‌ ಹಾಗೂ ಹೃತಿಕ್‌ ‘ವಾರ್‌ 2’ ಸಿನಿಮಾದಲ್ಲಿ ನಟಿಸುವ ಉತ್ಸಾಹವನ್ನು ತೋರಿಸಿದ್ದಾರೆ.

‘ಚಿತ್ರ ಬಿಡುಗಡೆಯಾಗಿ ವಾರವಾಗಿದೆಯಷ್ಟೇ, ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ನೋಡಿ ಈ ಸಿನಿಮಾದ ಅವತರಣಿಕೆ ಬಗ್ಗೆ ನಿರ್ಧಾರ ಮಾಡಲಾಗುವುದು. ವಾರ್‌ 2 ಸಿನಿಮಾ ಮುಂದಿನ ದಿನಗಳಲ್ಲಿ ಖಂಡಿತ ಬರಲಿದೆ’ ಎಂದು ಶ್ರಾಫ್‌ ಕಳೆದ ವಾರ ಸಂದರ್ಶನ ವೊಂದರಲ್ಲಿ ಹೇಳಿದ್ದರು.

‘ವಾರ್‌ 2’ ಪ್ರೇಕ್ಷಕರ ತೀರ್ಮಾನವನ್ನು ಅವಲಂಭಿಸಿರುತ್ತದೆ. ನಮ್ಮನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಪ್ರೇಕ್ಷಕರು ಇಷ್ಟಪಟ್ಟರೆ ನಾವು ನಟಿಸಲು ಸಿದ್ಧ’ ಎಂದು ಹೃತಿಕ್‌ ಹೇಳಿದ್ದರು.

ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ ಒಂದೇ ದಿನದಿಂದ ಹಲವು ದಾಖಲೆಗಳನ್ನು ಬರೆಯುತ್ತಲೇ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT