ಸೋಮವಾರ, ನವೆಂಬರ್ 18, 2019
28 °C

ಈ ವಾರ ತೆರೆಗೆ

Published:
Updated:

ಭರಾಟೆ

ನಟ ಶ್ರೀಮುರಳಿ ನಾಯಕನಾಗಿ ಚೇತನ್ ಕುಮಾರ್‌ ನಿರ್ದೇಶನದ ‘ಭರಾಟೆ’ ಸಿನಿಮಾ ಬಿಡುಗಡೆಯಾಗುತ್ತಿದೆ.

ಜಗದ್ಗುರು ಮೂವೀಸ್ ಲಾಂಛನದಡಿ ಸುಪ್ರೀತ್ ಈ ಚಿತ್ರ ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಗಿರೀಶ್ ಆರ್. ಗೌಡ ಅವರ ಛಾಯಾಗ್ರಹಣವಿದೆ. ದೀಪು ಎಸ್. ಕುಮಾರ್ ಅವರ ಸಂಕಲನವಿದೆ.
ಕೆ. ರವಿವರ್ಮ, ಗಣೇಶ್, ವಿಜಯ್‌ ಅವರ ಸಾಹಸ ನಿರ್ದೇಶನವಿದೆ. ಎ. ಹರ್ಷ, ಇಮ್ರಾನ್ ಮೋಹನ್, ಮುರಳಿ ನೃತ್ಯ ಸಂಯೋಜಿಸಿದ್ದಾರೆ. ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನವಿದೆ.

ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಪಿ. ಶರ್ಮ, ರಂಗಾಯಣ ರಘು, ತಾರಾ, ಶೋಭರಾಜ್, ಗಿರಿ, ರಾಜು ತಾಳಿಕೋಟೆ, ಸಾಧುಕೋಕಿಲ, ಕುರಿ ಪ್ರತಾಪ್, ಗಿರಿ, ಜೈಜಗದೀಶ್, ಕೇತನ್ ಕರಂಡೆ, ಪೆಟ್ರೋಲ್ ಪ್ರಸನ್ನ, ಧರ್ಮ, ರಾಜವಾಡೆ, ಮನಮೋಹನ್, ರಾಮ್, ಉಗ್ರಂ ಮಂಜು, ಅಶೋಕ್, ಅಮಿತ್, ಸಿಲ್ಲಿಲಲ್ಲಿ ಆನಂದ್ ತಾರಾಗಣದಲ್ಲಿದ್ದಾರೆ.

ಗಂಟುಮೂಟೆ

ಅಮೇಯುಕ್ತಿ ಸ್ಟೂಡಿಯೊಸ್ ಲಾಂಛನದಡಿ ಸಹದೇವ್ ಕೆಲವಡಿ ನಿರ್ಮಿಸಿರುವ ‘ಗಂಟುಮೂಟೆ’ ಚಿತ್ರ ತೆರೆ ಕಾಣುತ್ತಿದೆ.

ರೂಪಾ ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಹದೇವ್ ಕೆಲವಡಿ ಅವರ ಛಾಯಾಗ್ರಹಣವಿದೆ.

ಅಪರಜಿತ್ ಸ್ರಿಸ್ ಸಂಗೀತ ನಿರ್ದೇಶನವಿದೆ. ಪ್ರದೀಪ್ ನಾಯಕ್ ಅವರ ಸಂಕಲನವಿದೆ. ತೇಜು ಬೆಳವಾಡಿ, ನಿಶ್ಚಿತ್ ಕರೋಡಿ, ಭಾರ್ಗವ್ ರಾಜು, ಶರತ್ ಗೌಡ, ಸೂರ್ಯ ವಸಿಷ್ಠ, ಶ್ರೀರಂಗ ತಾರಾಬಳಗದಲ್ಲಿದ್ದಾರೆ.

ಸವರ್ಣ ದೀರ್ಘ ಸಂಧಿ

ವೀರು ಟಾಕೀಸ್ ಮತ್ತು ಶೈಲಾಕ್ ಎಂಟರ್‌ಟೈನ್‌ಮೆಂಟ್‌ ಲಾಂಛನದಲ್ಲಿ ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್, ಮನೋಮೂರ್ತಿ ಹಾಗೂ ವೀರೇಂದ್ರ ಶೆಟ್ಟಿ ನಿರ್ಮಿಸಿರುವ ‘ಸವರ್ಣ ದೀರ್ಘ ಸಂಧಿ’ ಬಿಡುಗಡೆಯಾಗುತ್ತಿದೆ.

ವೀರೇಂದ್ರ ಶೆಟ್ಟಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಲೋಗನಾಥನ್ ಶ್ರೀನಿವಾಸನ್ ಅವರದು. ಸಂಕೇತ್ ಶಿವಪ್ಪ ಸಂಕಲನ ಹಾಗೂ ದೇವಿಪ್ರಕಾಶ್ ಅವರ ಕಲಾ ನಿರ್ದೇಶನವಿದೆ.

ವೀರೇಂದ್ರ ಶೆಟ್ಟಿ, ಕೃಷ್ಣ, ಪದ್ಮಜಾ ರಾವ್, ಕೃಷ್ಣ ನಾಡಿಗ್, ನಿರಂಜನ್ ದೇಶಪಾಂಡೆ, ವಿವೇಕ್ ಪಂಜಾಬಿ, ಅವಿನಾಶ್ ರೈ, ರವಿ ಮಂಡ್ಯ, ಅಜಿತ್ ಹನುಮಕ್ಕನವರ್, ರವಿ ಭಟ್, ಬಸು ಕುಮಾರ್, ರಾಮರಾವ್, ದತ್ತಾತ್ರೇಯ ಕುರುಹಟ್ಟಿ, ಮಧುಸೂಧನ್, ಸುರೇಂದ್ರ ಬಂಟ್ವಾಳ್ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)