ಬೆಂಗಳೂರು:'ರಾಕಿಂಗ್ ಸ್ಟಾರ್' ಯಶ್ ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಅವರು ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಎರಡನೇ ಮಗುವಿನ ಆಗಮನದಿಂದ ಯಶ್ ಅವರ ಕುಟುಂಬದಲ್ಲಿ ಸಂತಸ ಇಮ್ಮಡಿಗೊಂಡಿದೆ.
ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ರಾಧಿಕಾ ಪಂಡಿತ್ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿತ್ತು. ಮಗು ಹಾಗೂ ರಾಧಿಕಾ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ರಾಧಿಕಾ ಅವರ ಮೊದಲ ಸೀಮಂತದ ಸಮಯದಲ್ಲಿ ಯಶ್ ಹೆಣ್ಣು ಮಗು ಬೇಕು ಎಂದು ಹೇಳಿದ್ದರೆ, ರಾಧಿಕಾ ಗಂಡು ಮಗು ಎಂದಿದ್ದರು. ಈಗ ಅವರಿಬ್ಬರ ಆಸೆಯಂತೆ ಎರಡೂ ಮಕ್ಕಳು ಹುಟ್ಟಿದ್ದು, ಅವರ ಸಂತೋಷವನ್ನು ದ್ವಿಗುಣಗೊಳಿಸಿದೆ.
ಆಸ್ಪತ್ರೆಗೆ ಹೋಗಿ ಮಗುವನ್ನು ನೋಡಿಕೊಂಡು ಬಂದು ಮಾತನಾಡಿದ ಯಶ್ ಅವರ ತಾಯಿ, ‘ಮೊಮ್ಮಗನ ನೋಡಿದೆ. ಯಶ್ ರೀತಿಯೇ ಇದೆ. ಅಪ್ಪ, ಅಮ್ಮ, ಮಗು ಮೂವರು ಚೆನ್ನಾಗಿದ್ದಾರೆ. ದೇವರ ಆಶಿರ್ವಾದಿಂದ ಹೆಣ್ಣು–ಗಂಡು ಮಕ್ಕಳು ಆಗಿವೆ’ ಎಂದು ಖುಷಿ ವ್ಯಕ್ತಪಡಿಸಿದರು.
‘9 ಗಂಟೆಗೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಕರ್ನಾಟಕ ಜನತೆಯ ಆಶೀರ್ವಾದ ಇಬ್ಬರ ಮೇಲೆ ಹೇಗಿತ್ತೋ, ಹಾಗೆಯೇ ನಮ್ಮ ಮೊಮ್ಮಕ್ಕಳ ಮೇಲೆಯೂ ಇರಲಿ’ ಎಂದು ಕೋರಿದರು.
ಇದನ್ನೂ ಓದಿ: ಐರಾ ಜತೆಗೆ ಇನ್ನೊಂದು ಮಗು ಬೇಕು- ಯಶ್ ದಂಪತಿ ಆಶಯ
ಇದೇ ಡಿಸೆಂಬರ್ 2ಕ್ಕೆ ಯಶ್–ರಾಧಿಕಾ ಜೋಡಿಯ ಮೊದಲ ಮಗಳು ಐರಾ ಮೊದಲ ವರ್ಷದ ಹುಟ್ಟುಹಬ್ಬ. ಎರಡನೇ ಮಗುವಿನ ವಿಷಯವನ್ನು ಐರಾ ನಾಮಕರಣಕ್ಕೂ ಮೂಲಕವೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.YGF 2: Chapter 2 ಎಂದು ಇದೆ. KGF ಗೊತ್ತು ಏನಪ್ಪಾ ಇದು YGF ಅಂತೀರಾ? YGF 2: Yash Going to be Father for Second Time ಎಂಬುದು ಇದರರ್ಥ! ಎಂದು ಅವರು ಟ್ವೀಟ್ ಮಾಡಿದ್ದರು.
ಯಶ್–ರಾಧಿಕಾ ಅವರಿಗೆ ಸ್ಯಾಂಡಲ್‌ವುಡ್ ಟ್ವಿಟ್ಟರ್‌ನಲ್ಲಿ ಅಭಿನಂದನೆಗಳ ಸುರಿಮಳೆ ಗೈದಿದ್ದಾರೆ. ಮಿಸ್ಟರ್ ಎಂಡ್ ಮಿಸೆಸ್ ರಾಮಚಾರಿ ನಿರ್ದೇಶಕ ಸಂತೋಷ್ ಆನಂದರಾಮ್ ಅವರೂ ಈ ಜೋಡಿಗೆ ಶುಭಕೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.