‘ಡಾಲಿ’ ಧನಂಜಯ ಹಾಗೂ ಸತ್ಯದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಝೀಬ್ರಾ’ ರಿಲೀಸ್ಗೆ ಸಜ್ಜಾಗುತ್ತಿದ್ದು, ಚಿತ್ರದಲ್ಲಿನ ಸತ್ಯದೇವ್ ಪಾತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಸತ್ಯದೇವ್ ಮತ್ತು ಧನಂಜಯ ಇಬ್ಬರೂ ನಾಯಕರಾಗಿದ್ದು, ಇಬ್ಬರದ್ದೂ ಇದು 26ನೇ ಸಿನಿಮಾ ಎಂಬುದು ವಿಶೇಷ. ಈಶ್ವರ್ ಕಾರ್ತಿಕ್ ನಿರ್ದೇಶನದ ಬಹುತಾರಾಗಣದ ಚಿತ್ರ ಇದಾಗಿದ್ದು, ತೆಲುಗು ಭಾಷೆಯಲ್ಲಿ ಮೂಲ ಸಿನಿಮಾವಿದೆ. ಡಾಲಿ ಧನಂಜಯ್ ಜೊತೆಗೆ ಅಮೃತಾ ಐಯ್ಯಂಗಾರ್, ಪ್ರಿಯಾ ಭವಾನಿ ಶಂಕರ್, ತೆಲುಗಿನ ಜನಪ್ರಿಯ ಹಾಸ್ಯನಟ ಸುನಿಲ್, ‘ಕಟ್ಟಪ್ಪ’ ಖ್ಯಾತಿಯ ಸತ್ಯರಾಜ್, ಊರ್ವಶಿ ರೌಟೆಲ್ಲಾ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಈಶ್ವರ್ ಕಾರ್ತಿಕ್ ಕಥೆ-ಚಿತ್ರಕಥೆ ಸಿನಿಮಾಗಿದೆ.

‘ಲಕ್ ಫೇವರ್ಸ್ ದಿ ಬ್ರೇವ್’ ಎಂಬ ಅಡಿಬರಹವಿರುವ ಈ ಚಿತ್ರವು ಕ್ರೈಮ್ ಆ್ಯಕ್ಷನ್ ಜಾನರ್ನಲ್ಲಿದೆ. ‘ಕೆ.ಜಿ.ಎಫ್.’ ಮತ್ತು ‘ಸಲಾರ್’ ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸತ್ಯ ಪೊನ್ಮಾರ್ ಅವರ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.