ನವದೆಹಲಿ: ಮಹಿಳೆಯರನ್ನು ಅಸಭ್ಯವಾಗಿ ತೋರಿಸುವ ಜೊತೆಗೆ ವಿವಿಧ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ULLU, ALTT ಮತ್ತು ಡೆಸಿಫ್ಲಿಕ್ಸ್ ಸೇರಿದಂತೆ 20ಕ್ಕೂ ಹೆಚ್ಚು ಒಟಿಟಿ ಪ್ಲಾಟ್ಫಾರ್ಮ್ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ಲೈಂಗಿಕತೆಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳ ಸುಲಭ ಲಭ್ಯತೆಗೆ ಕಡಿವಾಣ ಹಾಕಲು ಮತ್ತು ಡಿಜಿಟಲ್ ಕಂಟೆಂಟ್ಗಳು ಕಾನೂನು ಮತ್ತು ಸಭ್ಯತೆಯ ಮಿತಿ ಮೀರದಿರಲಿ ಎಂಬ ಉದ್ದೇಶದಿಂದ ನಿಷೇಧ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವಿಧ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಷೇಧಕ್ಕೊಳಗಾದ ಆ್ಯಪ್ಗಳ ಪಟ್ಟಿಯಲ್ಲಿ ALTT, ULLU, ಬಿಗ್ ಶಾಟ್ಸ್ ಅಪ್ಲಿಕೇಶನ್, ಡೆಸಿಫ್ಲಿಕ್ಸ್, ಬೂಮೆಕ್ಸ್, ನವರಸ ಲೈಟ್, ಗುಲಾಬ್ ಅಪ್ಲಿಕೇಶನ್, ಕಂಗನ್ ಅಪ್ಲಿಕೇಶನ್, ಬುಲ್ ಅಪ್ಲಿಕೇಶನ್, ಜಲ್ವಾ ಅಪ್ಲಿಕೇಶನ್, ವಾವ್ ಎಂಟರ್ಟೈನ್ಮೆಂಟ್, ಲುಕ್ ಎಂಟರ್ಟೈನ್ಮೆಂಟ್, ಹಿಟ್ಪ್ರೈಮ್, ಫೆನಿಯೊ, ಶೋಎಕ್ಸ್, ಸೋಲ್ ಟಾಕೀಸ್, ಅಡ್ಡಾ ಟಿವಿ, ಹಾಟ್ಎಕ್ಸ್ ವಿಐಪಿ, ಹಲ್ಚುಲ್ ಅಪ್ಲಿಕೇಶನ್, ಮೂಡ್ಎಕ್ಸ್, ನಿಯಾನ್ಎಕ್ಸ್ ವಿಐಪಿ, ಫ್ಯೂಗಿ, ಮೊಜ್ಫ್ಲಿಕ್ಸ್ ಮತ್ತು ಟ್ರಿಫ್ಲಿಕ್ಸ್ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಸಚಿವಾಲಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತಿತರ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಒಟಿಟಿ ವೇದಿಕೆಗಳ ನಿಷೇಧಕ್ಕೆ ನಿರ್ದೇಶನ ನೀಡಿದೆ.

ಕೆಲವು ವೇದಿಕೆಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ಎ ಉಲ್ಲಂಘಿಸಿ ಲೈಂಗಿಕತೆಗೆ ಸಂಬಂಧಿಸಿದ ಅಶ್ಲೀಲ ವಿಡಿಯೊ ಪ್ರಸಾರ ಮಾಡುತ್ತಿದ್ದವು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಸಿಪಿಸಿಆರ್) ಶಿಫಾರಸಿನ ಆಧಾರದಲ್ಲಿ ಈ ವೇದಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿವೆ.

ಈ ವರ್ಷ ಮೇನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಧ್ಯಪ್ರವೇಶದ ನಂತರ ಯುಎಲ್ಎಲ್ಯು ವೇದಿಕೆಯು ‘ಹೌಸ್ ಅರೆಸ್ಟ್’ ವೆಬ್ ಸರಣಿಯನ್ನು ತನ್ನ ವೆಬ್ಸೈಟ್ನಿಂದ ತೆಗೆದುಹಾಕಿತ್ತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಮಾಡದಂತೆ ಈ 25 ಒಟಿಟಿ ವೇದಿಕೆಗಳಿಗೆ ನೋಟಿಸ್ ಕಳುಹಿಸಲಾಗಿತ್ತು. ಆದರೂ ಅವು ಅಂತಹ ವಿಡಿಯೊ ಪ್ರಸಾರವನ್ನು ಮುಂದುವರಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.