ಬುಧವಾರ, ಅಕ್ಟೋಬರ್ 20, 2021
24 °C

ಸಾಮಾಜಿಕ ಮಾಧ್ಯಮ ಪ್ರವೇಶಿಸಿದ ಜ್ಯೋತಿಕಾ: ಹಿಮಾಲಯ ಪ್ರವಾಸದ ಅನುಭವ ಹಂಚಿಕೊಂಡ ನಟಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹುಭಾಷಾ ನಟಿ ಜ್ಯೋತಿಕಾ ಅವರು ತಮ್ಮ ಖಾಸಗಿ ಜೀವನದ ಅಪರೂಪದ ಸಂಗತಿಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುವುದು ತೀರಾ ಅಪರೂಪ. ನಟ ಸೂರ್ಯ ಅವರ ಪತ್ನಿಯಾಗಿರುವ ಇವರು ‘ಸೋಶಿಯಲ್ ಲೈಫ್’ ಬಗ್ಗೆ ತಮ್ಮ ಗಂಡನನ್ನೇ ಅನುಸರಿಸುತ್ತಿದ್ದಾರೆ.

ಅದಾಗ್ಯೂ ಇದೇ ಮೊದಲ ಬಾರಿಗೆ ಜ್ಯೋತಿಕಾ ಜನಪ್ರಿಯ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಪ್ರವೇಶಿಸಿದ್ದು, ತಮ್ಮ ಅಪರೂಪದ ಪ್ರವಾಸ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನೆನಪಿಗಾಗಿ ಜ್ಯೋತಿಕಾ ಅವರು ತಮ್ಮ ಸ್ನೇಹಿತರೊಡನೆ ಹಿಮಾಲಯ ಪ್ರವಾಸ ಕೈಗೊಂಡಿದ್ದರು. ಇದರ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಇದೇ ಮೊದಲ ಬಾರಿಗೆ ಸೋಶಿಯಲ್ ಮಿಡಿಯಾ ಪ್ರವೇಶ ಮಾಡಿದ್ದೇನೆ. ಇದರೊಂದಿಗೆ ನನ್ನ ಮಧುರ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಸ್ವಾತಂತ್ರೋತ್ಸವದ ಪ್ರಯುಕ್ತ ಹಿಮಾಲಯ ಪ್ರವಾಸ ಕೈಗೊಂಡು ಸುಮಾರು 70 ಕಿಮೀ ಟ್ರೆಕ್ಕಿಂಗ್ ಮಾಡಿ ಬಂದಿರುವೆ. ಇದೊಂದು ಅದ್ಭುತ ಅನುಭವ. ಜೀವನವನ್ನು ಆಸ್ವಾಧಿಸದ ಹೊರತು ಅದರ ಹೊಸತನ ಗೊತ್ತಾಗುವುದಿಲ್ಲ. ಭಾರತ ಒಂದು ಸುಂದರ ದೇಶ, ಜೈ ಹಿಂದ್‘ ಎಂದು ಭಾರತದ ಭಾವುಟವನ್ನು ಹಿಡಿದುಕೊಂಡ ಫೋಟೊ ಹಂಚಿಕೊಂಡಿದ್ದಾರೆ.

ತಮಿಳು, ತೆಲುಗು ಹಾಗೂ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಜ್ಯೋತಿಕಾ ಸದ್ಯ ‘ಅದನ್‌ಪಿರಪ್ಪೆ‘ (Udanpirappe) ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ ದೀಪಾವಳಿಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೇ ಜ್ಯೋತಿಕಾ ಅವರು ಇನ್ಸ್ಟಾಗ್ರಾಮ್‌ ಪ್ರವೇಶ ಮಾಡಿದ ಕೆಲವೇ ದಿನಗಳಲ್ಲಿ 1.3 ಮಿಲಿಯನ್ ಫಾಲೋವರ್ಸ್‌ಗಳನ್ನು ಸಂಪಾದಿಸಿದ್ದಾರೆ.

 

ಇದನ್ನೂ ಓದಿ: ಭಾರತದಲ್ಲಿ 'ಕಾಮಸೂತ್ರ' ದಹನ: ಲೇಖಕಿ ತಸ್ಲಿಮಾ ನಸ್ರೀನ್ ಆಕ್ರೋಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು