ಭಾನುವಾರ, ಜುಲೈ 3, 2022
22 °C

ಏಪ್ರಿಲ್‌ನಲ್ಲಿ ರಣಬೀರ್ ಕಪೂರ್–ಆಲಿಯಾ ಭಟ್ ಮದುವೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE PHOTO

ಬೆಂಗಳೂರು: ಬಾಲಿವುಡ್‌ನ ಬಹು ಚರ್ಚಿತ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಈ ವರ್ಷದ ಏಪ್ರಿಲ್‌ನಲ್ಲಿ ಮದುವೆಯಾಗುವುದು ಬಹುತೇಕ ಖಚಿತ ಎನ್ನುವ ಸುದ್ದಿ ಚಿತ್ರರಂಗದಲ್ಲಿ ಕೇಳಿಬಂದಿದೆ.

ಆದರೆ ರಣಬೀರ್ ಮತ್ತು ಆಲಿಯಾ ಕುಟುಂಬ ಈ ಸಂಗತಿಯನ್ನು ನಿರಾಕರಿಸುತ್ತಲೇ ಬಂದಿದ್ದು, ಮದುವೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿದ್ದಾರೆ.

ಮುಂದಿನ ತಿಂಗಳು ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ, ಈಗಾಗಲೇ ಈ ಜೋಡಿ, ಖ್ಯಾತ ವಸ್ತ್ರ ವಿನ್ಯಾಸಕರನ್ನು ಕೂಡ ಭೇಟಿಯಾಗಿತ್ತು.

ಆಲಿಯಾ ಮತ್ತು ರಣಬೀರ್ ಕಪೂರ್ ‘ಬ್ರಹ್ಮಾಸ್ತ್ರ‘ ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ.

ಸಿನಿಮಾ ಚಿತ್ರೀಕರಣ ಉತ್ತರ ಪ್ರದೇಶದ ವಾರಾಣಸಿ, ಕಾಶಿ ಮುಂತಾದ ತಾಣಗಳಲ್ಲಿ ನಡೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು