ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್ ಪ್ರೈಮ್ ವಿಡಿಯೊ ಮೊಬೈಲ್ ಆವೃತ್ತಿ ಈಗ ಲಭ್ಯ

ಅಮೆಜಾನ್ ಪ್ರೈಮ್ ವಿಡಿಯೊ ಮೊಬೈಲ್ ಆವೃತ್ತಿ ಎಲ್ಲ ಬಳಕೆದಾರರಿಗೆ ದೊರೆಯುತ್ತಿದೆ.
Last Updated 8 ನವೆಂಬರ್ 2022, 11:24 IST
ಅಕ್ಷರ ಗಾತ್ರ

ಬೆಂಗಳೂರು: ಅಮೆಜಾನ್ ಇಂಡಿಯಾ ದೇಶದ ಬಳಕೆದಾರರಿಗೆ ಪ್ರೈಮ್ ಮೊಬೈಲ್ ವಿಶೇಷ ಪ್ಲ್ಯಾನ್ ಪರಿಚಯಿಸುತ್ತಿದೆ.

ಅಮೆಜಾನ್ ಪ್ರೈಮ್ ವಾರ್ಷಿಕ ಪ್ಲ್ಯಾನ್ ದರವನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ₹999ರಿಂದ ₹1,499ಕ್ಕೆ ಏರಿಕೆ ಮಾಡಲಾಗಿತ್ತು.

ಈ ಬಾರಿ ಅಮೆಜಾನ್, ಪ್ರೈಮ್ ಮೊಬೈಲ್ ಆವೃತ್ತಿ ಪ್ಲ್ಯಾನ್ ಪರಿಚಯಿಸಿದೆ. ಪ್ರೈಮ್ ಮೊಬೈಲ್ ಆವೃತ್ತಿ ₹599 ದರಕ್ಕೆ ವಾರ್ಷಿಕವಾಗಿ ಲಭ್ಯವಿರಲಿದೆ. ಅಂದರೆ, ಪ್ರತಿ ತಿಂಗಳು ₹50 ರಂತೆ ದರ ಇರಲಿದೆ.

ಈ ಪ್ಲ್ಯಾನ್ ಒಂದು ಸ್ಮಾರ್ಟ್‌ಫೋನ್‌ಗೆ ಮಾತ್ರ ಲಭ್ಯವಿರಲಿದೆ. ಅಂದರೆ ಒಮ್ಮೆಗೆ, ಒಂದು ಡಿವೈಸ್‌ನಲ್ಲಿ ಮಾತ್ರ ಪ್ರೈಮ್ ವಿಡಿಯೊ ಸ್ಟ್ರೀಮಿಂಗ್ ಆಗಲಿದೆ.

ಮೊಬೈಲ್ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು, ಈ ಪ್ಲ್ಯಾನ್ ಪರಿಚಯಿಸಲಾಗಿದೆ ಎಂದು ಅಮೆಜಾನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT