ಶನಿವಾರ, ಡಿಸೆಂಬರ್ 3, 2022
20 °C
ಅಮುಲ್ ಹೊಸ ಪೋಸ್ಟ್ ಮೂಲಕ ರಣಬೀರ್–ಆಲಿಯಾಗೆ ಶುಭಕೋರಿದೆ.

ಆಲಿಯಾ ಭಟ್–ರಣಬೀರ್ ಕಪೂರ್‌ಗೆ ಕ್ಯೂಟ್ ಆಗಿ ಶುಭಕೋರಿದ ಅಮುಲ್ ಇಂಡಿಯಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಈಗ ಹೆಣ್ಣು ಮಗುವಿನ ಪಾಲಕರಾಗಿದ್ದಾರೆ.

ಆಲಿಯಾ ಭಟ್ ಅವರು ನವೆಂಬರ್ 6ರ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ರಣಬೀರ್–ಆಲಿಯಾ ದಂಪತಿಯ ಮಗುವನ್ನು ಬಾಲಿವುಡ್ ಮಂದಿ ಸಂಭ್ರಮದಿಂದ ಬರಮಾಡಿಕೊಂಡಿದ್ದು, ತಾರೆಯರ ಆಪ್ತರು, ಅಭಿಮಾನಿಗಳು ಸಾಮಾಜಿಕ ತಾಣಗಳ ಮೂಲಕ ಶುಭಹಾರೈಸಿದ್ದಾರೆ.

ಹೆಣ್ಣು ಮಗು ಜನಿಸಿರುವ ಸಂತಸವನ್ನು ಆಲಿಯಾ ಭಟ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು.

ಈ ದಂಪತಿಗೆ ಅಮುಲ್ ಇಂಡಿಯಾ ವಿಶೇಷ ಕ್ಯಾರಿಕೇಚರ್ ಪೋಸ್ಟ್ ಮೂಲಕ ಶುಭಹಾರೈಸಿದೆ.

ಸಾಮಾಜಿಕ ತಾಣ ಖಾತೆಯಲ್ಲಿ ಅಮುಲ್ ಇಂಡಿಯಾ ಕ್ಯಾರಿಕೇಚರ್ ಪ್ರಕಟಿಸಿದ್ದು, ತಾರಾ ದಂಪತಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಪ್ರತಿ ವಿಶೇಷ ಸಂದರ್ಭದಲ್ಲಿ ಅಮುಲ್ ಇಂಡಿಯಾ ಆಕರ್ಷಕ ಪೋಸ್ಟ್ ಮೂಲಕ ಶುಭಹಾರೈಸುವ ಪರಿಪಾಠವನ್ನು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು