ಸೋಮವಾರ, ಜೂನ್ 21, 2021
30 °C

ಭಿನ್ನತೆಯ ಗೆರೆ ದಾಟಿ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ತೆರೆದ ಕರೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ಮಾಧ್ಯಮಗಳಿಂದ ದೂರವೇ ಉಳಿದಿದ್ದ ಕರೀನಾ ಕಪೂರ್‌ ಅವರ ಅಭಿಮಾನಿಗಳಿಗೆ ಶುಕ್ರವಾರ ರಾತ್ರಿ ಅಚ್ಚರಿಯೊಂದು ಕಾದಿತ್ತು. ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರೀಯರಾಗಿರುವ ಸೆಲೆಬ್ರಿಟಿಗಳ ನಡುವೆ ಕರೀನಾ ಭಿನ್ನವಾಗಿ ಕಾಣುತ್ತಿದ್ದರು. ಆದರೆ, ಈ ಭಿನ್ನತೆಯ ಗೆರೆ ದಾಟಿರುವ ಕರೀನಾ ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮ ಒಂದರಲ್ಲಿ ತಮ್ಮ ಅಧಿಕೃತ ಖಾತೆ ತೆರೆದಿದ್ದಾರೆ. 

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ @kareenakapoorkhan ಹೆಸರಿನ ಅಧಿಕೃತ ಖಾತೆಯೊಂದಿಗೆ ಕರೀನಾ ಕಾಣಿಸಿಕೊಂಡಿದ್ದಾರೆ. ಪ್ಯುಮಾ ಕಂಪನಿಯ ರಾಯಭಾರಿಯಾಗಿ ತೆಗೆಸಿಕೊಂಡಿರುವ ಫೋಟೊಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಸ್ಪೋರ್ಟ್ಸ್ ಉಡುಗೆಯಲ್ಲಿರುವ ಅವರು, ಕಪ್ಪು ಬಣ್ಣದ ಚಿನ್ನದ ಟ್ರ್ಯಾಕ್‌ ಹೊಂದಿರುವ ಜಾಕೆಟ್‌, ಪ್ಯುಮಾ ಕಂಪನಿಯ ಸಂಕೇತವಿರುವ ಕಿವಿಯೋಲೆ, ಪ್ಯುಮಾ ಬ್ರಾಂಡ್‌ನ ಸ್ಪೋರ್ಟ್ಸ್ ಶ್ಯೂಗಳನ್ನು ಕರೀನಾ ಧರಿಸಿದ್ದಾರೆ. 

ಖಾತೆ ತೆರೆದ 24 ಗಂಟೆಗಳಲ್ಲಿ 1 ಮಿಲಿಯನ್‌ ಫಾಲೋವರ್‌ಗಳನ್ನು ಕರೀನಾ ಹೊಂದಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು