ಭಾನುವಾರ, ಮಾರ್ಚ್ 26, 2023
24 °C
ಗಾಯಕಿ ಮರಿಲಿಯಾ ಮೆಂಡೊಂಕಾ ಸಾವು

ವಿಮಾನ ಅಪಘಾತದಲ್ಲಿ ಮೃತಪಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕಿ ಮರಿಲಿಯಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬ್ರಾಸಿಲಿಯಾ: ಶುಕ್ರವಾರ ಬ್ರೆಜಿಲ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಗಾಯಕಿ ಮರಿಲಿಯಾ ಮೆಂಡೊಂಕಾ ಅವರು ಮೃತಪಟ್ಟಿದ್ದಾರೆ.

ಬ್ರೆಜಿಲ್‌ನ ಮಿನಾಸ್‌ ಗೆರೈಸ್ ಎಂಬ ಪ್ರಾಂತ್ಯದಲ್ಲಿ ಲಘು ವಿಮಾನ ಪತನಗೊಂಡು ಈ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಇಬ್ಬರು ಪೈಲೆಟ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೆಂಡೊಂಕಾ ಅವರು ಮಿನಾಸ್‌ಗೆ ಸಂಗೀತ ಕಾರ್ಯಕ್ರಮ ನೀಡಲು ತೆರಳುತ್ತಿದ್ದರು.

'ಸಂಬಂಧಿಸಿದ ಪ್ರಾಧಿಕಾರದಿಂದ ಘಟನೆಯ ತನಿಖೆಯನ್ನು ನಡೆಸಲು ಆದೇಶಿಸದಲಾಗಿದೆ' ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಇವಾನ್ ಲೋಪ್ಸ್ ತಿಳಿಸಿದ್ದಾರೆ.

‘ಘಟನೆಗೆ ನಿರ್ಧಿಷ್ಟ ಕಾರಣ ಏನೆಂಬುದು ಪತ್ತೆಯಾಗಿಲ್ಲ. ಆದರೆ, ಟವರ್‌ ಒಂದಕ್ಕೆ ವಿಮಾನದ ರೆಕ್ಕೆ ತಾಗಿದ್ದರಿಂದ ಅದು ಪತನಗೊಂಡು ಜಲಪಾತವೊಂದರಲ್ಲಿ ಬಿದ್ದು ಅಪಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ' ಎಂದು ಪತ್ರಿಕಾಗೋಷ್ಟಿಯಲ್ಲಿ ಇವಾನ್ ಲೂಪ್ಸ್ ತಿಳಿಸಿದ್ದಾರೆ.

ಮರಿಲಿಯಾ ಮೆಂಡೊಂಕಾ ಅವರು 2019 ರಲ್ಲಿ ಪ್ರತಿಷ್ಟಿತ ಲ್ಯಾಟಿನ್ ಗ್ರ್ಯಾಮಿ ಪ್ರಶಸ್ತಿಯನ್ನು ಅವರ ‘sertanejo' ಎಂಬ ಅಲ್ಬಂ ಹಾಡುಗಳಿಗೆ ಪಡೆದಿದ್ದರು. ಈ ಖ್ಯಾತ ಗಾಯಕಿಗೆ 2.20 ಕೋಟಿ ಜನ ಯೂಟ್ಯೂಬ್‌ನಲ್ಲಿ ಫಾಲೋವರ್ಸ್‌ ಇದ್ದಾರೆ. ಅಲ್ಲದೇ ಇವರು ಸಂಗೀತ ಕ್ಷೇತ್ರದ ‘ಹಾಟೆಸ್ಟ್‌‘ ಗಾಯಕಿ ಎಂಬ ಬಿರುದನ್ನೂ ಕೂಡ ಹೊಂದಿದ್ದರು.

ಇದನ್ನೂ ಓದಿ: Photos; ಪತಿ ನಿಕ್ ಜೋನಸ್ ಜೊತೆ ದೀಪಾವಳಿ ಆಚರಿಸಿದ ನಟಿ ಪ್ರಿಯಾಂಕಾ ಚೋಪ್ರಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು