ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮನೆಗೆ ಪ್ರವೇಶಿಸಿದ ಮಾಧುರಿ ದೀಕ್ಷಿತ್: ₹12 ಲಕ್ಷ ಬಾಡಿಗೆ

Last Updated 23 ಮಾರ್ಚ್ 2022, 4:43 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಮಾಧುರಿ ದೀಕ್ಷಿತ್ ನೇನೆ ಅವರು ಮುಂಬೈನಲ್ಲಿ ಹೊಸ ಮನೆಗೆ ತೆರಳಿದ್ದಾರೆ.

ಸಮುದ್ರ ತೀರದ ನೋಟವನ್ನು ನೀಡುವ ಹೊಸ ಬಾಡಿಗೆ ಮನೆಗೆ ಅವರು ಪ್ರತಿ ತಿಂಗಳು ₹12 ಲಕ್ಷ ಬಾಡಿಗೆ ಪಾವತಿಸಲಿದ್ದಾರೆ ಎಂದು ವರದಿಯಾಗಿದೆ.

ಬಹು ಅಂತಸ್ತಿನ ಕಟ್ಟಡವೊಂದರ 29ನೇ ಮಹಡಿಯಲ್ಲಿ ಮಾಧುರಿ ದೀಕ್ಷಿತ್ ಕುಟುಂಬ ವಾಸವಿರಲಿದೆ. 5500 ಚದರ ಅಡಿಯ ವಿಸ್ತೀರ್ಣ ಹೊಂದಿರುವ ಮನೆ ಇದಾಗಿದೆ ಎಂದು ‘ಪಿಂಕ್‌ವಿಲ್ಲಾ‘ ಹೇಳಿದೆ.

ಮುಂಬೈನಲ್ಲಿ ಸಮುದ್ರ ತೀರದ ನೋಟ ಹೊಂದಿರುವ ವಿಶಾಲ ಮನೆಗಳಿಗೆ ಬೇಡಿಕೆ ಇದ್ದು, ತಮ್ಮ ಅಭಿರುಚಿಗೆ ಅನುಗುಣವಾಗಿ ಮಾಧುರಿ ಮನೆಯ ಒಳಾಂಗಣ ವಿನ್ಯಾಸ ಮಾಡಿಸಿದ್ದಾರೆ ಎಂದು ವಿನ್ಯಾಸಕಿ ಅಪೂರ್ವ ಶ್ರಾಫ್ ಹೇಳಿದ್ದಾರೆ.

ಮಾಧುರಿ ಅವರು ಇತ್ತೀಚೆಗೆ ‘ದಿ ಫೇಮ್ ಗೇಮ್‘ ಡಿಜಿಟಲ್ ಸರಣಿಯಲ್ಲಿ ಕಾಣಿಸಿಕೊಂಡು, ಪ್ರಶಂಸೆ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT