ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ ಕರ್ದಾಶಿಯಾನ್ ಲುಕ್ ಕಂಡು ಬೆರಗಾದ ಬಾಲಿವುಡ್ ಬೆಡಗಿ ಕರೀನಾ ಕಪೂರ್!

Last Updated 14 ಸೆಪ್ಟೆಂಬರ್ 2021, 12:41 IST
ಅಕ್ಷರ ಗಾತ್ರ

ಬೆಂಗಳೂರು: ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಮೆಟ್ ಗಾಲಾ 2021 (Met Gala) ಫ್ಯಾಶನ್ ಶೋದಲ್ಲಿ ಮಾಡೆಲ್ ಹಾಗೂ ಅಮೆರಿಕದ ಟೆಲಿವಿಷನ್ ತಾರೆ ಕಿಮ್ ಕರ್ದಾಶಿಯಾನ್ ಅವರಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ.

ಕಿಮ್ ಹೊಸ ಅವತಾರ ಕಂಡು ಎಲ್ಲರೂ ಬೆರಗಾಗಿರುವಂತೆ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಕೂಡ ಭಾರಿ ಚಕಿತರಾಗಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಮೆಟ್‌ ಗಾಲಾದಲ್ಲಿನ ಕಿಮ್ ಅವರ ಫೋಟೊ ಹಂಚಿಕೊಂಡು ‘ಕ್ಯಾ ಹೊ ರಹಾ ರೈ‘ (ಏನಾಗುತ್ತಿದೆ) ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಿಮ್ ಫ್ಯಾಶನ್ ಕಂಡು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

1948 ರಿಂದ ಅಮೆರಿಕದ ನ್ಯೂಯಾರ್ಕ್‌ ಮೆಟ್ರೊಪಾಲಿಟಿನ್ ಕಲಾ ವಸ್ತುಸಂಗ್ರಹಾಲಯಕ್ಕೆ ನಿಧಿ ಸಂಗ್ರಹಾರ್ಥವಾಗಿ ನಡೆಯುತ್ತಿರುವ ಮೆಟ್ ಗಾಲಾ ಫ್ಯಾಶನ್ ಶೋ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ನಡೆದಿರಲಿಲ್ಲ. ಈ ವರ್ಷ ಕಳೆದ ಭಾನುವಾರದಿಂದ ಆರಂಭವಾಗಿದ್ದು ಜಗದ್ವಿಖ್ಯಾತ ಮಾಡೆಲ್‌ಗಳು ಈ ಫ್ಯಾಶನ್‌ ಶೋದಲ್ಲಿ ಬೆಡಗು ಭಿನ್ನಾಣಗಳಿಂದ ಕಂಗೊಳಿಸುತ್ತಿದ್ದಾರೆ.

ಕಿಮ್ ಕರ್ದಾಶಿಯಾನ್ ಲುಕ್ ಕಂಡು ಬೆರಗಾದ ಬಾಲಿವುಡ್ ಬೆಡಗಿ ಕರೀನಾ ಕಪೂರ್!

ಕಿಮ್ ಫ್ಯಾಶನ್ ಲೋಕದ ರಾಣಿ. ಅವರು ಹೊರಹೊಮ್ಮಿಸುವ ಒಂದೊಂದು ಫ್ಯಾಶನ್‌ಗಳು ಫ್ಯಾಶನ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸುತ್ತವೆ.

ಹೀಗೆ ಕಳೆದ ಭಾನುವಾರ ಕಿಮ್ ಹಾಕಿದ್ದ ಉಡುಗೆಯೊಂದು ಸಖತ್ ವೈರಲ್ ಆಗಿದೆ. ಅವರ ವೇಷ ಕಂಡು ನೆಟ್ಟಿಗರು ಹೌಹಾರಿದ್ದಾರೆ. ಏಕೆಂದರೆ ಕಿಮ್ ತೊಟ್ಟ ಉಡುಗೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ.

ಸಂಪೂರ್ಣ ಮುಖ ಹಾಗೂ ದೇಹವನ್ನು ಲೆದರ್ ಉಡುಗೆಯಲ್ಲಿ ಮುಚ್ಚಿ, ಮುಖವನ್ನು ಕೂಡ ಲೆದರ್ ಮಾಸ್ಕ್‌ನಿಂದ ಮುಚ್ಚಿ ಒಂದು ರೀತಿ ಏಲಿಯನ್ ರೀತಿ ಕಾಣುವ ಹಾಗೇ ಕಿಮ್ ಕಂಡು ಬಂದಿದ್ದಾರೆ. ಅವರು ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಗಾಲಾ2021 ಫ್ಯಾಶನ್ ಶೋ ಕಾರ್ಯಕ್ರಮಕ್ಕೆ ಈ ರೀತಿ ಉಡುಗೆ ಧರಿಸಿ ಬಂದಿದ್ದರು. ಈ ವೇಷದಲ್ಲಿ ಕಿಮ್‌ ಕಂಡು ಪ್ರೇಕ್ಷಕರು ಇದು ಯಾರು? ಎಂದು ಗೊಂದಲಕ್ಕೆ ಒಳಗಾಗಿದ್ದರು.

ಸಂಪೂರ್ಣ ದೇಹವನ್ನು ಮುಚ್ಚಿದ್ದ ಉಡುಗೆಯೊಂದಿಗೆ ಎತ್ತರದ ಚಪ್ಪಲಿಗಳನ್ನು ಧರಿಸಿ ಕಿಮ್ ನಡೆದುಕೊಂಡು ಹೋಗುತ್ತಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲಾತಣಗಳಲ್ಲಿ ಅವರೇ ಪ್ರಕಟಿಸಿದ್ದಾರೆ. ನೋಡುಗರೆಲ್ಲರೂ, ‘ಹೌದಪ್ಪಾ ಹೌದು, ಫ್ಯಾಶನ್ ಅಂದ್ರೆ ಇದು‘ ಎಂದು ಉದ್ಘಾರ ತೆಗೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT