ಮಂಗಳವಾರ, ಜನವರಿ 18, 2022
27 °C

'ಮಮ್ಮಿ ವೈಬ್ಸ್': ಮಗುವಿನೊಂದಿಗೆ ಹೊಸ ಚಿತ್ರವನ್ನು ಹಂಚಿಕೊಂಡ ನಟಿ ಪ್ರೀತಿ ಜಿಂಟಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ನವೆಂಬರ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ಜೈ ಮತ್ತು ಜಿಯಾ ಎಂಬ ಅವಳಿ ಮಕ್ಕಳನ್ನು ಪತಿ ಜೀನ್ ಗುಡೆನಫ್ ಅವರೊಂದಿಗೆ ಸ್ವಾಗತಿಸಿದರು. ಅಂದಿನಿಂದ ಇಂದಿನವರೆಗೂ ಮಾತೃತ್ವವನ್ನು ಮತ್ತು ತನ್ನ ಮಕ್ಕಳೊಂದಿಗೆ ಕಳೆದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ನಟಿ ಇತ್ತೀಚೆಗೆ ತನ್ನ ಮಗುವನ್ನು ಪ್ರೀತಿಯಿಂದ ತಬ್ಬಿಕೊಂಡಿರುವ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಜೊತೆಗೆ ಎರಡು ಹೃದಯದ ಎಮೋಜಿಗಳೊಂದಿಗೆ 'ಮಮ್ಮಿ ವೈಬ್ಸ್' ಎಂದು ಬರೆದಿದ್ದಾರೆ. ಫೋಟೊದಲ್ಲಿ ನಗುಮುಖದಿಂದಿರುವ ಪ್ರೀತಿ, ಹಸಿರು ಪುಲ್‌ಓವರ್‌ ಧರಿಸಿದ್ದಾರೆ. ಅವರ ಕೈಯಲ್ಲಿರುವ ಚಿಕ್ಕ ಮಗು ಪಿಂಕ್ ಸ್ವೆಟರ್ ಅನ್ನು ಧರಿಸಿರುವುದು ಕಂಡುಬಂದಿದೆ. ಆದರೆ ಮುಖವನ್ನು ತೋರಿಸಿಲ್ಲ.

2021ರ ನವೆಂಬರ್‌ನಲ್ಲಿ ತಾನು ಮತ್ತು ಅವರ ಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿರುವುದಾಗಿ ತಿಳಿಸಿದ್ದರು. ಆಗ ತಮ್ಮ ಫೋಟೊವನ್ನು ಹಂಚಿಕೊಂಡಿದ್ದ ಅವರು, 'ಎಲ್ಲರಿಗೂ ನಮಸ್ಕಾರ, ನಾನು ಇಂದು ನಮ್ಮ ಅದ್ಭುತ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಜೀನ್ ಮತ್ತು ನಾನು ತುಂಬಾ ಸಂತೋಷಪಟ್ಟಿದ್ದೇವೆ. ನಮ್ಮ ಅವಳಿಗಳಾದ ಜೈ ಜಿಂಟಾ ಗುಡೆನಫ್ ಮತ್ತು ಜಿಯಾ ಜಿಂಟಾ ಗುಡೆನಫ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ. ಈ ಹೊಸ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ನಮ್ಮ ಕೃತಜ್ಞತೆಗಳು' ಎಂದಿದ್ದಾರೆ.

ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದ ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗೆ ಪ್ರೀತಿ ಜಿಂಟಾ ಧನ್ಯವಾದ ಸಲ್ಲಿಸಿದ್ದಾರೆ.

ಪ್ರೀತಿ ಜಿಂಟಾ 2016 ರಲ್ಲಿ ಅಮೆರಿಕಾದ ಜೀನ್ ಗುಡೆನಫ್‌ ಅವರನ್ನು ವಿವಾಹವಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು