ಗುರುವಾರ , ಆಗಸ್ಟ್ 18, 2022
25 °C

ವಾರಾಣಸಿಯ ಘಾಟ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡ ರಣಬೀರ್–ಆಲಿಯಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH FILE PHOTO

ಬೆಂಗಳೂರು: ಬಾಲಿವುಡ್‌ನ ಪ್ರೇಮಪಕ್ಷಿಗಳಾಗಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜತೆಯಾಗಿ ಹೊರಗಡೆ ಹೋಗುವಾಗ ಅವರನ್ನು ಸದಾ ಕ್ಯಾಮೆರಾ ಕಣ್ಣುಗಳು ಹಿಂಬಾಲಿಸುತ್ತಿರುತ್ತದೆ.

ರಣಬೀರ್ ಮತ್ತು ಆಲಿಯಾ ಪ್ರವಾಸ ಹೋಗುವಾಗಲೂ, ಡಿನ್ನರ್‌ಗೆ ಹೋದರೂ ಮತ್ತು ಸಿನಿಮಾ ಚಿತ್ರೀಕರಣಕ್ಕೆ ಒಟ್ಟಿಗೆ ತೆರಳಿದರೂ ಅದು ಸುದ್ದಿಯಾಗುತ್ತದೆ.

ಅದೇ ರೀತಿಯಲ್ಲಿ, ರಣಬೀರ್ ಮತ್ತು ಆಲಿಯಾ, ಉತ್ತರ ಪ್ರದೇಶದ ವಾರಾಣಸಿಯ ಘಾಟ್ ಒಂದರಲ್ಲಿ ಜತೆಯಾಗಿ ಸಾಗುತ್ತಿರುವುದನ್ನು ಅವರ ಅಭಿಮಾನಿಗಳು ಪತ್ತೆಹಚ್ಚಿದ್ದಾರೆ.

ಇವರಿಬ್ಬರೂ ಬ್ರಹ್ಮಾಸ್ತ್ರ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದು, ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಸಲುವಾಗಿ ಇಬ್ಬರೂ ಜತೆಯಾಗಿ ಇರುವುದನ್ನು ನೋಡಿ ಅಭಿಮಾನಿಗಳು, ಫೋಟೊ–ವಿಡಿಯೊ ತೆಗೆದು ವೈರಲ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು