ಹುಟ್ಟುಹಬ್ಬದ ಸಂಭ್ರಮದಲ್ಲಿ ಶಮಿತಾ ಶೆಟ್ಟಿ: ಗೆಳೆಯ ರಾಕೇಶ್ ಬಾಪಟ್ ಶುಭಾಶಯ

ಬೆಂಗಳೂರು: ನಟಿ ಶಮಿತಾ ಶೆಟ್ಟಿ ಅವರು ಬುಧವಾರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 15, ಥರ್ಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ ನಟಿ, 43ನೇ ವರ್ಷಕ್ಕೆ ಕಾಲಿರಿಸಿದ್ದಾರೆ.
ಶಮಿತಾ ಬಾಯ್‌ಫ್ರೆಂಡ್ ರಾಕೇಶ್ ಬಾಪಟ್, ಪ್ರೇಯಸಿ ಹುಟ್ಟುಹುಬ್ಬಕ್ಕೆ ವಿಶೇಷವಾಗಿ ಶುಭಹಾರೈಸಿದ್ದಾರೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶಮಿತಾ ಜತೆಗಿರುವ ಫೋಟೊ ಒಂದನ್ನು ಪೋಸ್ಟ್ ಮಾಡಿರುವ ರಾಕೇಶ್, ಹ್ಯಾಪಿ ಬರ್ತ್‌ಡೇ ಲವ್ ಎಂದು ಹೃದಯದ ಎಮೋಜಿ ಸಹಿತ ಅಡಿಬರಹ ನೀಡಿದ್ದಾರೆ.
ಶಮಿತಾ ಶೆಟ್ಟಿಯ ಸಹೋದರಿ ಶಿಲ್ಪಾ ಶೆಟ್ಟಿ, ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಡಿಸ್ಟರ್ಬ್ ಮಾಡಬೇಡಿ ಎಂದು ಸೆಲ್ಫಿ ಪೋಸ್ಟ್ ಮಾಡಿದ ಸುಹಾನಾ ಖಾನ್
ಬಿಗ್ ಬಾಸ್ ಸೀಸನ್ 15ರಲ್ಲಿ ಶಮಿತಾ ಜತೆ ಸಹಸ್ಪರ್ಧಿಯಾಗಿದ್ದ ರಾಜೀವ್, ಶಮಿತಾ ಒಟ್ಟಿಗೆ ಇರುವ ಫೋಟೊ ಪೋಸ್ಟ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.