ಶನಿವಾರ, ಜನವರಿ 29, 2022
18 °C

ಒಟಿಟಿ: ‘ಸೇ ಯೆಸ್ ಟು ದಿ ಡ್ರೆಸ್’ ಡಿಸ್ಕವರಿಯಲ್ಲಿ ಬಣ್ಣದ ಉಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದುವೆಯ ಋತು ಹತ್ತಿರವಾಗುತ್ತಿದ್ದಂತೆಯೇ ಡಿಸ್ಕವರಿ ಪ್ಲಸ್‌ನಲ್ಲಿ ‘ಸೇ ಯೆಸ್ ಟು ದಿ ಡ್ರೆಸ್‌’ ಪರಿಕಲ್ಪನೆ ಅಡಿ ಭಾರತೀಯ ಆವೃತ್ತಿಯನ್ನು ರೂಪಿಸಿದೆ. 

‘ವಧು-ವರರು ತಮ್ಮ ಕನಸಿನ ಉಡುಪುಗಳು ಸಿದ್ಧವಾಗುವುದನ್ನು ನೇರ ನೋಡುವ ಮತ್ತು ಅವರ ಆಶಯಗಳು ಮತ್ತು ಕಲ್ಪನೆಗಳನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಈ ಸರಣಿಯಲ್ಲಿ ಮಾಡಲಾಗಿದೆ’ ಎಂದಿದೆ ಡಿಸ್ಕವರಿ.

ಕಾರ್ಯಕ್ರಮ ಈಗಾಗಲೇ ಡಿಸ್ಕವರಿ ಪ್ಲಸ್‌ನಲ್ಲಿ ಪ್ರಸಾರ ಆಗುತ್ತಿದೆ. ಭಾರತದ ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳ ಧಿರಿಸುಗಳನ್ನು ಕಲಾತ್ಮಕ ದೃಶ್ಯಗಳಲ್ಲಿ ತೋರಿಸಲಾಗಿದೆ. ನತಾಶಾ ದಲಾಲ್ ಈ ಕಾರ್ಯಕ್ರಮದಲ್ಲಿ ವಸ್ತ್ರವಿನ್ಯಾಸಗಳ ಪರಿಕಲ್ಪನೆಯನ್ನು ತೋರಿಸಿದ್ದಾರೆ. ಕಾರ್ಯಕ್ರಮದ ಭಾರತೀಯ ಆವೃತ್ತಿಯನ್ನು ದಿವ್ಯಕ್ ಡಿಸೋಜಾ ಪ್ರಸ್ತುತಪಡಿಸಿದ್ದಾರೆ.  

ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳಾದ ನೀತಾ ಲಲ್ಲಾ, ಅಭಿನವ್ ಮಿಶ್ರಾ, ವರುಣ್ ಬಹ್ಲ್, ನತಾಶಾ ದಲಾಲ್, ಸಂದೀಪ್ ಖೋಸ್ಲಾ ಸೇರಿದಂತೆ ಹಲವಾರು ಫ್ಯಾಷನ್‌ ವಿನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು