ತೆಲುಗಿನ ಬಿಗ್‌ಬಾಸ್ ಸರಣಿಯಲ್ಲಿ ಅಭಿಜಿತ್ ದುದ್ದಲ ಗೆಲುವಿನ ನಗೆ ಬೀರಿದರು. 105 ದಿನಗಳ ಕಾಲ ಈ ಸರಣಿ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಇತ್ತೀಚೆಗೆ ನಡೆದ ಸಮಾರೋಪದಲ್ಲಿ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರು ಅಭಿಜಿತ್ ಅವರಿಗೆ ಟ್ರೋಫಿ ನೀಡಿದ್ದಾರೆ.

ಅಭಿಜಿತ್ ಗೆದ್ದ ಬಹುಮಾನ ಎಷ್ಟು ಗೊತ್ತಾ? ₹ 25 ಲಕ್ಷ ಮತ್ತು ಒಂದು ಬೈಕ್. ಇನ್ನೂ ಕೆಲವು ಮೂಲಗಳ ಪ್ರಕಾರ ಅಭಿಜಿತ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿ ವಾರಕ್ಕೆ ₹ 4 ಲಕ್ಷ ಪಡೆಯುತ್ತಿದ್ದರಂತೆ. ಈ ಶೋದಲ್ಲಿ ಭಾಗವಹಿಸಿದ್ದ ಸೈಯದ್ ಸೊಹೈಲ್ ಅವರೂ ಕೂಡಾ ₹ 25 ಲಕ್ಷ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಮೊತ್ತದಲ್ಲಿ ₹ 10 ಲಕ್ಷವನ್ನು ಅನಾಥಾಶ್ರಮಕ್ಕೆ ನೀಡುವುದಾಗಿ ಹೇಳಿದ್ದಾರೆ.

ಅಭಿಜಿತ್ ಅವರು 15 ಮಂದಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.ಅಖಿಲ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಸೊಹೈಲ್, ಅರಿಯಾನಾ, ಹಾರಿಕಾ ಕ್ರಮವಾಗಿ 2, 3 ಮತ್ತು 4 ರನ್ನರ್ ಅಪ್ ಆಗಿದ್ದಾರೆ.

ಅಭಿಜಿತ್ ಅವರು 2012ರಲ್ಲಿ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. 2 ವರ್ಷಗಳ ಹಿಂದೆ ‘ಪೆಳ್ಳಿ ಗೋಲ’ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.