ಬೆಂಗಳೂರು: ‘ಡ್ಯಾನ್ಸ್ ಇಂಡಿಯಾ ಲಿಟ್ಲ್ ಮಾಸ್ಟರ್‘ ಟಿವಿ ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಕಾಲಿರಿಸಿದ ನಟಿ ಅವನೀತ್ ಕೌರ್, 20ನೇ ವಯಸ್ಸಿಗೆ ಕೋಟಿ ಬೆಲೆಯ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.
ಹಿಂದಿ ಕಿರಿತೆರೆ ನಟಿ ಮತ್ತು ಟಿಕು ವೆಡ್ಸ್ ಶೆರು ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿರುವ ಅವನೀತ್, ₹80 ಲಕ್ಷ (ಎಕ್ಸ್. ಶೋ ರೂಂ ದರ ಬೆಲೆಯ ಐಷಾರಾಮಿ ರೇಂಜ್ ರೋವರ್ ವೆಲಾರ್ ಕಾರು ಖರೀದಿಸಿದ್ದಾರೆ.
ಈ ಕಾರಿನ ಆನ್ ರೋಡ್ ಬೆಲೆ ₹1 ಕೋಟಿಗೂ ಅಧಿಕವಾಗಿರಲಿದೆ. ಹೊಸ ಕಾರು ಖರೀದಿಸಿರುವ ಕುರಿತು ಅವನೀತ್ ಕೌರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಡ್ಯಾನ್ಸಿಂಗ್ ಅನ್ನು ಆಸಕ್ತಿಯ ಕ್ಷೇತ್ರವನ್ನಾಗಿಸಿಕೊಂಡಿದ್ದ ಅವನೀತ್, ಹಲವು ಟಿವಿ ಧಾರಾವಾಹಿಗಳು, ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.