ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Big Boss 8 | 3ನೇ ವಾರದ ಎಲಿಮಿನೇಷನ್​​: ನಾಮಿನೇಟ್​ ಆದ 9 ಜನ ಇವರೇ ನೋಡಿ!

Last Updated 16 ಮಾರ್ಚ್ 2021, 3:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್ ಬಾಸ್ ಎಂಟನೇ ಸೀಸನ್‌ನ ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದ್ದು 9 ಸದಸ್ಯರು ನಾಮಿನೇಟ್ ಆಗಿದ್ದಾರೆ.

ಮೊದಲ ವಾರದಲ್ಲಿ ಧನುಶ್ರೀ ,ಎರಡನೇ ವಾರದಲ್ಲಿ ನಿರ್ಮಲಾ ಮನೆಯಿಂದ ಹೊರಹೋಗಿದ್ದಾರೆ. ಮೂರನೇ ವಾರದಲ್ಲಿ 9 ಸದಸ್ಯರು ನಾಮಿನೇಟ್‌ ಆಗಿದ್ದು ಇವರಲ್ಲಿ ಒಬ್ಬರು ಮನೆಯಿಂದ ಹೊರ ನಡೆಯಲಿದ್ದಾರೆ.

ಪ್ರಶಾಂತ್ ಸಂಬರಗಿ, ಅರವಿಂದ್, ನಿಧಿ, ವಿಶ್ವನಾಥ್, ದಿವ್ಯಾ ಉರುಡುಗ, ಸುಬ್ಬಯ್ಯ, ಗೀತಾ, ರಘು, ಹಾಗೂ ದಿವ್ಯಾ ಸುರೇಶ್ ನಾಮಿನೇಟ್ ಪಟ್ಟಿಯಲ್ಲಿ ಇದ್ದಾರೆ. ಇವರ ಜೊತೆ ಶಂಕರ್ ಅಶ್ವತ್ಥ್ ಕೂಡ ನಾಮಿನೇಟ್ ಆಗಿದ್ದರು. ಆದರೆ ಬಿಗ್‌ ಬಾಸ್‌ ಮನೆಯ ನಾಯಕ ತಮ್ಮ ವಿಶೇಷ ಅಧಿಕಾರದ ಮೂಲಕ ಅವರನ್ನು ಉಳಿಸಿಕೊಂಡಿದ್ದಾರೆ.

ಸೋಮವಾರ ಬಿಗ್‌ ಬಾಸ್‌ ಮನೆಯಲ್ಲಿ ಸಾಕಷ್ಟು ಮನರಂಜನೆ ಕೊಟ್ಟಿದ್ದು ಜೋಡಿ ಟಾಸ್ಕ್. ಅದರಲ್ಲೂ ಅರವಿಂದ ಮತ್ತು ದಿವ್ಯಾ ಉರುಡುಗ ಅವರ ಜೋಡಿ ಟಾಸ್ಕ್‌ ಆಯ್ಕೆ ಪ್ರಕ್ರಿಯೆ ಮನೆಯಲ್ಲಿ ಸಖತ್‌ ಮಜಾ ಕೊಟ್ಟಿತ್ತು. ಗಂಡು ಮಕ್ಕಳು ತಮ್ಮ ಜೋಡಿಯನ್ನು ಒಲಿಸಿಕೊಳ್ಳಲು ಅರ್ಧ ಗಂಟೆ ಟೈಮ್ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT