ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK-10 | ಕಾವೇರಿತು ಕ್ಯಾಪ್ಟನ್ಸಿ ಟಾಸ್ಕ್‌: ಸಂಗೀತಾ, ತನಿಷಾ, ಪ್ರತಾಪ್‌ ಸ್ಪರ್ಧೆ

Published 29 ಡಿಸೆಂಬರ್ 2023, 10:41 IST
Last Updated 29 ಡಿಸೆಂಬರ್ 2023, 10:41 IST
ಅಕ್ಷರ ಗಾತ್ರ

ಬೆಂಗಳೂರು: ವಾರ ಪೂರ್ತಿ ಕುಟುಂಬ ಸದಸ್ಯರ ಆಗಮನದಿಂದಾಗಿ ಭಾವುಕತೆಯಲ್ಲಿ ತುಂಬಿ ಹೋಗಿದ್ದ ಬಿಗ್‌ಬಾಸ್‌ ಮನೆ, ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್‌ಬಾಸ್‌ ಮನೆಯಲ್ಲೀಗ ಕ್ಯಾಪ್ಟನ್‌ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಈ ವಾರ ಮನೆಯೊಳಗೆ ಬಂದ ಸ್ಪರ್ಧಿಗಳ ಕುಟುಂಬದವರಿಗೆ ಬಿಗ್‌ಬಾಸ್ ಒಂದು ಪ್ರಶ್ನೆಯನ್ನು ಕೇಳಿದ್ದರು. ಅವರ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾವ ಸ್ಪರ್ಧಿ ಈ ಮನೆಯ ಕ್ಯಾಪ್ಟನ್‌ ಆಗಬೇಕೆಂದು ಬಯಸುತ್ತೀರಿ ಎಂದು ಕೇಳಿದ್ದರು. ಇದಕ್ಕೆ ಸ್ಪರ್ಧಿಗಳ ಕುಟುಂಬದವರು ತಮ್ಮ ಅಭಿಪ್ರಾಯಗಳನ್ನು ಸೂಚಿಸಿದ್ದರು. ಇದರ ಅನುಸಾರ ಸಂಗೀತಾ, ತನಿಷಾ ಹಾಗೂ ಪ್ರತಾಪ್‌ ಹೆಸರು ಅತಿ ಹೆಚ್ಚು ಬಾರಿ ಕೇಳಿ ಬಂದಿತು. ಹೀಗಾಗಿ ಈ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಲು ಸಜ್ಜಾಗಿದ್ದರು. ಆದರೆ, ಈ ನಡುವೆ ಬಿಗ್‌ಬಾಸ್‌ ಇನ್ನೊಂದು ಶಾಕ್‌ ಕೊಟ್ಟಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿರುವ ಈ ಮೂವರು ಸದಸ್ಯರಲ್ಲಿ ಯಾರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವುದು ಬೇಡ ಎಂಬುದನ್ನು ಸೂಚಿಸಲು ಮನೆಯ ಸದಸ್ಯರಿಗೆ ಬಿಗ್‌ಬಾಸ್‌ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಬಹುತೇಕ ಮನೆ ಮಂದಿ ಪ್ರತಾಪ್‌ ಅವರ ಹೆಸರನ್ನು ಸೂಚಿಸಿದ್ದಾರೆ. ಪ್ರತಾಪ್‌ ಅಧಿಕಾರ ಸಿಕ್ಕ ಕೂಡಲೇ ಸ್ಟ್ರಿಕ್ಟ್‌ ಆಗಿ ಬಿಡ್ತಾರೆ, ಅವರು ಮೂಡಿ, ಪದೇ ಪದೇ ಮೂಡ್‌ಸ್ವಿಂಗ್‌ ಆಗುತ್ತಿರುತ್ತದೆ. ಹೀಗೆ ಹಲವು ಅಭಿಪ್ರಾಯಗಳು ಕೇಳಿ ಬಂದಿವೆ. ಇದರಿಂದ ಪ್ರತಾಪ್‌ ಕೂಡ ನೊಂದುಕೊಂಡಿದ್ದಾರೆ.

ಹಾಗಾದರೆ, ಈ ವಾರ ಮನೆಯ ಸದಸ್ಯರ ಅಭಿಪ್ರಾಯದ ಮೇರೆಗೆ ಪ್ರತಾಪ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗೆ ಉಳಿಯುತ್ತಾರಾ, ಸಂಗೀತಾ ಮತ್ತು ತನಿಷಾ ಇಬ್ಬರಲ್ಲಿ ಯಾರು ಈ ವಾರದ ಕ್ಯಾಪ್ಟನ್‌ ಆಗುತ್ತಾರೆ ಎಂಬ ಪ್ರಶ್ನೆಗಳಿಗೆ ಬಿಗ್‌ಬಾಸ್‌ ಸಂಚಿಕೆಯನ್ನು ಕಾದು ನೋಡಬೇಕಿದೆ.

ಬಿಗ್‌ಬಾಸ್‌ ಕನ್ನಡ 24 ಗಂಟೆ ನೇರಪ್ರಸಾರವನ್ನು Jio Cinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT