ಕನ್ನಡದ ಬಿಗ್ಬಾಸ್ ಸೀಸನ್ 12ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಸೂರಜ್ ಸಿಂಗ್ ಕಿರುತೆರೆಯಲ್ಲಿ ನಟನಾಗಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ಬಾಸ್ನಿಂದ ಹೊರ ಬರುತ್ತಿದ್ದಂತೆ ಸೂರಜ್ಗೆ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸಲು ಅವಕಾಶ ಸಿಕ್ಕಿದೆ.
.ಒಲಿದ ಅದೃಷ್ಟ: ಬಿಗ್ಬಾಸ್ 12ರ ಮೊದಲ ಫೈನಲಿಸ್ಟ್ ಆಗಿ ಫಿನಾಲೆ ತಲುಪಿದ ಧನುಷ್ ಗೌಡ.ಅಚ್ಚರಿಯ ರೀತಿಯಲ್ಲಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಾತಿನ ಮಲ್ಲಿ ಮಲ್ಲಮ್ಮ.
ಈ ಮೊದಲು ಬಾಣಸಿಗನಾಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದ ಸೂರಜ್ ಸಿಂಗ್, ಬಿಗ್ಬಾಸ್ ಮನೆಗೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿಬಿಟ್ಟಿತ್ತು. ಈಗ ಕಲರ್ಸ್ ಕನ್ನಡದಲ್ಲಿ ಶುರುವಾಗುತ್ತಿರುವ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಶೀಘ್ರದಲ್ಲೇ ಪ್ರಸಾರ ಕಾಣಲಿದೆ.

‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ದೇವದತ್ ದೇಶಮುಖ್ ಎಂಬ ಪಾತ್ರದಲ್ಲಿ ಸೂರಜ್ ಸಿಂಗ್ ನಟಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಅಮೂಲ್ಯ ಭಾರದ್ವಾಜ್ ಅವರು ನಟಿಸುತ್ತಿದ್ದಾರೆ. ಜೊತೆಗೆ ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ದೇವದತ್ ಹಾಗೂ ತಿಲಕ್ ಇಬ್ಬರು ಅಣ್ಣ-ತಮ್ಮ ಆಗಿರುತ್ತಾರೆ. ಇಬ್ಬರೂ ಆತ್ಮೀಯರಾಗಿರುತ್ತಾರೆ. ತಿಲಕ್ ಹಾಗೂ ಪವಿತ್ರಾ ಪ್ರೀತಿಸುತ್ತಿರುತ್ತಾರೆ. ಆದರೆ ಕೊನೆಯ ಕ್ಷಣದಲ್ಲಿ ದೇವದತ್ ಅನ್ನು ಮದುವೆಯಾಗುವ ಪರಿಸ್ಥಿತಿ ಎದುರಾಗುತ್ತದೆ. ಇದು ಪವಿತ್ರ ಬಂಧನ ಧಾರಾವಾಹಿಯ ಕಥೆಯಾಗಿದೆ.

ಬಿಗ್ಬಾಸ್ನಿಂದ ಜನಪ್ರಿಯತೆ ಪಡೆದುಕೊಂಡ ಸೂರಜ್ ಸಿಂಗ್ ಅವರಿಗೆ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇದೇ ಅವರ ಮೊದಲ ಧಾರಾವಾಹಿ ಆಗಿರುವುದರಿಂದ ಸೂರಜ್ ಯಾವ ರೀತಿ ನಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.