ಕನ್ನಡದ ಬಿಗ್ಬಾಸ್ ಮನೆಯ ಆಟವನ್ನು ರಂಗೇರಿಸಲು ಮಾಜಿ ಸ್ಪರ್ಧಿಗಳು ಬಂದಿದ್ದಾರೆ. ಅತಿಥಿಗಳಾಗಿ ಬಿಗ್ಬಾಸ್ ಮನೆಗೆ ಬಂದ ಉಗ್ರಂ ಮಂಜು ಹಾಗೂ ರಜತ್ ಕಿಶನ್ ಅವರ ಕೋಪಕ್ಕೆ ಗಿಲ್ಲಿ ನಟ ಗುರಿಯಾಗಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಗಿಲ್ಲಿ ನಟನ ವಿರುದ್ಧ ಉಗ್ರಂ ಮಂಜು ಸಿಟ್ಟಾಗಿದ್ದಾರೆ. ಬಿಡುಗಡೆಯಾದ ಪ್ರೋಮೊದಲ್ಲಿ ಉಗ್ರಂ ಮಂಜು, ರಜತ್ ಕಿಶನ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ಗೆ ಬಿಗ್ಬಾಸ್ ಅಭಿನಂದನೆಗಳನ್ನು ತಿಳಿಸುತ್ತಿದ್ದರು. ಅದರಲ್ಲೂ ಉಗ್ರಂ ಮಂಜುಗೆ ‘ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ’ ಎಂದು ಹೇಳುತ್ತಿದ್ದಂತೆ ಗಿಲ್ಲಿ ನಟ ‘ಎರಡನೆಯದ್ದಾ.. ಮೂರನೆಯದ್ದಾ? ಎಂದು ಮಧ್ಯ ಮಾತನಾಡಿದ್ದಾರೆ.

ಆಗ ಗಿಲ್ಲಿಯ ಮಾತು ಉಗ್ರಂ ಮಂಜು ಅವರ ಕೋಪಕ್ಕೆ ಕಾರಣವಾಗಿದೆ. ‘ಪರ್ಸನಲ್ ಅಂತ ಬಂದು ಬಿಟ್ಟರೆ, ಸಪ್ಲೇಯರೂ ಅಲ್ಲ. ನಾನು ಅತಿಥಿನೂ ಅಲ್ಲ. ಬೇರೆನೇ ಆಗುತ್ತೆ’ ಎಂದು ಉಗ್ರಂ ಮಂಜು ಕೋಪದಲ್ಲಿ ಹೇಳಿದ್ದಾರೆ. ಮತ್ತೊಂದು ಕಡೆ ಮೋಕ್ಷಿತಾ ಪೈ ಬಿಗ್ ಬಾಸ್ ಮನೆಗೆ ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿ ಮಾಡುವುದಕ್ಕೆ ಬಂದಿದ್ದೇವೆ ಎನ್ನುತ್ತಾರೆ. ಆಗ ಗಿಲ್ಲಿ ‘ಬಿಟ್ಟಿ ಊಟ ಮಾಡಿಕೊಂಡು ಹೋಗುವುದಕ್ಕೆ ಬಂದಿದ್ದೀರಾ? ಎನ್ನುತ್ತಾರೆ. ಈ ಮಾತಿಗೆ ರಜತ್ ಕೂಡ ಕೆಂಡ ಕಾರಿದ್ದಾರೆ.

‘ನೀನು ಕೊಡ್ತಾ ಇದ್ದಿಯೇನಪ್ಪಾ ಬಿಟ್ಟಿ ಊಟ. ಮಾತುಗಳು ಸರಿಯಾಗಿ ಬರಲಿ. ಎಲ್ಲರ ಹತ್ತಿರ ಮಾತಾಡುವಂತೆ ನನ್ನ ಹತ್ತಿರ ಮಾತಾಡುವುದಕ್ಕೆ ಬರಬೇಡ. ಎಷ್ಟರಲ್ಲಿ ಇರಬೇಕು ಅಷ್ಟರಲ್ಲಿ ಇರು’ ಅಂತ ರಜತ್ ಗರಂ ಆಗಿದ್ದಾರೆ. ಇನ್ನು, ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಡೆದುಕೊಂಡ ರೀತಿ ಉಗ್ರಂ ಮಂಜು, ರಜತ್ ಸೇರಿದಂತೆ ಎಲ್ಲರಿಗೂ ಬೇಸರ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.