ಕನ್ನಡ ಬಿಗ್ಬಾಸ್ ಸೀಸನ್ 12 ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಾತ್ರೋರಾತ್ರಿ ಬಿಗ್ಬಾಸ್ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಲರ್ಸ್ ಕನ್ನಡ ಹೊಸ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ.

ಅದರಲ್ಲಿ ಸ್ಪರ್ಧಿಗಳು ಮಂಚದ ಮೇಲೆ ಮಲಗಿಕೊಂಡಿದ್ದಾಗ ಏಕಾಏಕಿ ಸೈರನ್ ಆಗಿದೆ. ಆ ಕೂಡಲೇ ಗಾಬರಿಗೊಂಡ ಮನೆಮಂದಿ ಎದ್ದು ಕುಳಿತುಕೊಂಡಿದ್ದಾರೆ. ಆಗ ಬಿಗ್ಬಾಸ್ ‘ಗ್ರ್ಯಾಂಡ್ ಫಿನಾಲೆಗೂ ಮುಂಚೆಯೇ ಒಬ್ಬರ ಆಟ ಇಲ್ಲಿಗೆ ಮುಗಿದು ಬಿಗ್ಬಾಸ್ ಮನೆಯಿಂದ ಹೊರ ಹೋಗುತ್ತಾರೆ. ಯಾರನ್ನು ಈ ಮನೆಯಿಂದ ಹೊರ ಹಾಕಲು ಇಚ್ಛಿಸುತ್ತಾರೆಂದು ಘೋಷಿಸಬೇಕು. ಯಾರ ಚಿತ್ರ ಮುಖ್ಯ ದ್ವಾರಕ್ಕೆ ಹತ್ತಿರವಾಗಿತ್ತದೆಯೋ ಆ ಸದಸ್ಯ ಆಟದಿಂದ ಎಲಿಮಿನೇಟ್ ಆಗುತ್ತಾರೆ’ ಎಂದಿದ್ದಾರೆ.

ಈ ವಾರಾಂತ್ಯದಲ್ಲಿ ಮೊದಲ ಫಿನಾಲೆ ನಡೆಯುತ್ತಿದೆ. ಅದಕ್ಕೂ ಮೊದಲೇ ಬಿಗ್ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ಈ ವಾರದ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಎಷ್ಟು ಮಂದಿ ಬಿಗ್ಬಾಸ್ ಮನೆಯಿಂದ ಔಟ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
.BBK12: ಕೊನೆ ಕ್ಷಣದಲ್ಲಿ ಸ್ಪಂದನಾ, ಮಾಳು ನಿಪನಾಳ ಫೈನಲಿಸ್ಟ್ ಆಗಿದ್ದೇಗೆ? .ಬಿಗ್ಬಾಸ್ ಮೊದಲ ಫಿನಾಲೆಗೆ ಅಖಾಡ ಸಿದ್ಧ: ಅಳಿವು-ಉಳಿವಿನ ಹೋರಾಟದಲ್ಲಿ ಸ್ಪರ್ಧಿಗಳು.
ಮಿಡ್ ಸೀಸನ್ ಫಿನಾಲೆ ಯಾವಾಗ?

ಅಕ್ಟೋಬರ್ 18 ಮತ್ತು 19ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಗೂ ಜಿಯೊ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ಒಟ್ಟು 6 ಗಂಟೆಗಳ ಕಾಲ ಬಿಗ್ಬಾಸ್ ವೀಕ್ಷಕರಿಗೆ ಸಂಭ್ರಮ ನೀಡಲು ತಂಡ ಸಿದ್ಧವಾಗಿದೆ. ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಅತ್ಯಂತ ಅಪೂರ್ವ ಅಪರೂಪದ ಆಕರ್ಷಕ ಕಾರ್ಯಕ್ರಮವಾಗಿ ಇರಲಿದೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ, ರಾಶಿಕಾ ಈ ನಾಲ್ಕು ಮಂದಿ ಫೈನಲಿಸ್ಟ್ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ. ಉಳಿದವರೆಲ್ಲಾ ಈ ವಾರ ನಾಮಿನೇಟ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.