ಈ ಬಾರಿಯ ಬಿಗ್ಬಾಸ್ 12ನೇ ಆವೃತ್ತಿ Expect The Unexpected (ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ) ಎಂಬ ಥೀಮ್ನಲ್ಲಿ ಮೂಡಿ ಬರುತ್ತಿದೆ. ಈ ಬಾರಿಯ ಬಿಗ್ಬಾಸ್ ಮನೆಗೆ ಒಂಟಿ ಹಾಗೂ ಜಂಟಿ ಎಂಬ ಪರಿಕಲ್ಪನೆಯೊಂದಿಗೆ 19 ಸ್ಪರ್ಧಿಗಳು ಆಗಮಿಸಿದ್ದರು. ಹೀಗಾಗಿ ದಿನದಿಂದ ದಿನಕ್ಕೆ ಬಿಗ್ಬಾಸ್ ಕಾರ್ಯಕ್ರಮ ರೋಚಕವಾಗಿ ಮೂಡಿ ಬರುತ್ತಿದೆ.

ಈಗಾಗಲೇ ಬಿಗ್ಬಾಸ್ ಮನೆಯಿಂದ ಮೊದಲ ವಾರದಲ್ಲೇ ಇಬ್ಬರು ಸ್ಪರ್ಧಿಗಳಾದ ಕರಿಬಸಪ್ಪ ಮತ್ತು ಆರ್ಜೆ ಅಮಿತ್ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಆದರೆ, ಎರಡನೇ ವಾರದಲ್ಲಿ ಎಲಿಮಿನೇಷನ್ ನಡೆದಿಲ್ಲ. ಬದಲಾಗಿ ಬಿಗ್ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಗುಡ್ ನ್ಯೂಸ್ ಕೊಟ್ಟರು. ಜೊತೆಗೆ ಅಚ್ಚರಿ ಕೂಡ ಮೂಡಿಸಿದ್ದರು.
.BBK12: ಕೊನೆಗೂ ಜಂಟಿ-ಒಂಟಿಗಳ ಆಟಕ್ಕೆ ಪೂರ್ಣ ವಿರಾಮ ಹೇಳಿದ ಬಿಗ್ಬಾಸ್.ಚಂದ್ರಪ್ರಭ ಗ್ಲಾಸ್ ಒಡೆದು ಹಾಕಿದ್ದೇಲ್ಲಾ ಡ್ರಾಮಾನಾ? ಸತ್ಯ ಹೇಳಿದ ಸತೀಶ್.
ಹೌದು, ಕೊನೆ ಕ್ಷಣದಲ್ಲಿ ಸ್ಪಂದನಾ, ಮಾಳು ನಿಪನಾಳ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದಾರೆ. ಪ್ರೇಕ್ಷಕರ ವೋಟಿಂಗ್ ಪ್ರಕಾರ, ಮಾಳು ನಿಪನಾಳ ಹಾಗೂ ಸ್ಪಂದನಾ ಸೋಮಣ್ಣ ಜಂಟಿ ಫೈನಲಿಸ್ಟ್ಗಳಾಗಿ ಆಯ್ಕೆಯಾಗಿದ್ದಾರೆ. ಅದರೊಂದಿಗೆ ಮಾಳು ನಿಪನಾಳ ಹಾಗೂ ಸ್ಪಂದನಾಗೆ ಮುಂದಿನ ವಾರಕ್ಕೆ ಇಮ್ಯೂನಿಟಿ ಕೂಡ ಸಿಕ್ಕಿದೆ.

ಕಳೆದ ವಾರ ಒಟ್ಟು 10 ಸ್ಪರ್ಧಿಗಳು ಬಿಗ್ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದರು. ಜಂಟಿಗಳಾದ ಮಂಜು ಭಾಷಿಣಿ-ರಾಶಿಕಾ, ಮಾಳು ನಿಪನಾಳ-ಸ್ಪಂದನಾ, ಅಭಿಷೇಕ್- ಅಶ್ವಿನಿ ಎಸ್.ಎನ್. ಒಂಟಿಗಳಾದ ಜಾಹ್ನವಿ, ಧನುಷ್, ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಾಮಿನೇಟ್ ಆಗಿದ್ದರು. ಅದರಲ್ಲಿ ಕಿಚ್ಚ ಸುದೀಪ್ ಒಬ್ಬರ ನಂತರ ಒಬ್ಬರಂತೆ ಎಲ್ಲರನ್ನು ಸೇಫ್ ಮಾಡುತ್ತಾ ಬಂದರು. ಕೊನೆಗೆ ಮಾಳು ನಿಪನಾಳ-ಸ್ಪಂದನಾ ಉಳಿದುಕೊಂಡಾಗ ಅವರಿಗೆ Expect The Unexpected (ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ) ಪೆಟ್ಟಿಗೆ ತೆರೆಯಲು ಹೇಳಿದರು. ಆಗ ಆ ಪೆಟ್ಟಿಗೆ ಒಳಗಡೆ ಫೈನಲಿಸ್ಟ್ ಎಂದು ಬರೆಯಲಾಗಿತ್ತು. ಇದನ್ನು ನೋಡುತ್ತಿದ್ದಂತೆ ಮಾಳು ನಿಪನಾಳ-ಸ್ಪಂದನಾ ಖುಷಿಪಟ್ಟರು.

ಇದಾದ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ಜನ ಈ ವಾರ ವೋಟ್ ಮಾಡಿರೋದು ಸತ್ಯ. ಆದರೆ ವೋಟ್ ಮಾಡಿರೋದು ನಿಮ್ಮನ್ನ ಹೊರಗೆ ಕಳಿಸೋಕೆ ಅಲ್ಲ. ಫಿನಾಲೆಗೆ ಯಾರು ಹೋಗಬೇಕು ಅನ್ನೋದಕ್ಕೆ ವೋಟಿಂಗ್ ನಡೆದಿತ್ತು. ಮಾಳು ಹಾಗೂ ಸ್ಪಂದನಾ ನಿಮ್ಮನ್ನು ಜನ ಫೈನಲಿಸ್ಟ್ ಆಗಿ ಆಯ್ಕೆ ಮಾಡಿದ್ದಾರೆ. ಮೂರನೇ ಫೈನಲಿಸ್ಟ್ ಆಗಿ ನೀವು ಆಯ್ಕೆ ಆಗಿದ್ದೀರಿ, ಅಭಿನಂದನೆಗಳು. ನಿಮಗೆ ಮುಂದಿನ ವಾರ ಇಮ್ಯೂನಿಟಿ ಸಿಗುತ್ತೆ ಎಂದು ಹೇಳಿದ್ದಾರೆ.

ಮತ್ತೆ ಮಾತನಾಡಿದ ಸುದೀಪ್, (ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನು ಉಳಿಸೋಕೆ ಈ ವಾರ ನೀವು ಮಾಡಿದ್ದ ವೋಟ್ಗಳನ್ನು, ಮುಂದಿನ ವಾರ ಫಿನಾಲೆಗೆ ಫೈನಲಿಸ್ಟ್ಗಳನ್ನ ಆರಿಸಲು ಪರಿಗಣಿಸಿದ್ದೇವೆ) ಈ ವಾರ ಇಲ್ಲಿ ಶೋನಲ್ಲಿ ಉಳಿಸಿಕೊಳ್ಳೋದಕ್ಕೆ ಅಂತ ನಡೆದಿರೋ ವೋಟಿಂಗ್. ನಮ್ಮ ಸ್ಪರ್ಧಿಗಳಿಗೆ ವೋಟಿಂಗ್ ಹೇಗೆ ಪ್ರೊಜೆಕ್ಟ್ ಆಗಿತ್ತು ಅಂದರೆ, ಇದು ಎಲಿಮಿನೇಷನ್ ವೋಟಿಂಗ್ ಅಂತ ಅವರು ಅಂದುಕೊಂಡಿದ್ದರು. ಆದರೆ ನಿಮ್ಮ ವೋಟಿಂಗ್ ಇಲ್ಲಿ ತಲುಪಿದೆ. ಮುಂದಿನ ವಾರ ಮೊದಲ ಮಿಡ್ ಸೀಸನ್ ಫಿನಾಲೆ ನಡೆಯಲಿದೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ-ಸ್ಪಂದನಾ ಸೋಮಣ್ಣ, ನಿಮಗೆ ಇಮ್ಯೂನಿಟಿ ಇದೆ. ಉಳಿದವರು ನಾಮಿನೇಟ್ ಆಗಿದ್ದೀರಿ. ಮಾಸ್ ಎವಿಕ್ಷನ್ ಆಗುತ್ತೆ ಎಚ್ಚರಿಕೆಯಿಂದ ಇರಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.