ನವದೆಹಲಿ: ಭಾರತ ಮಹಿಳಾ ತಂಡವು ಡಿಸೆಂಬರ್ 21ರಿಂದ 30ರವರೆಗೆ ಶ್ರೀಲಂಕಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಲಂಕಾ ವಿರುದ್ಧದ ಪಂದ್ಯಗಳು ವಿಶಾಖಪಟ್ಟಣ ಮತ್ತು ತಿರುವನಂತಪುರದಲ್ಲಿ ನಡೆಯಲಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ತಿಳಿಸಿದೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತದ ವನಿತೆಯರಿಗೆ ಮೊದಲ ಸರಣಿ ಇದಾಗಿದೆ.

ಮೂಲ ವೇಳಾಪಟ್ಟಿ ಪ್ರಕಾರ ಇದೇ ಅವಧಿಯಲ್ಲಿ ಭಾರತ ತಂಡವು ತವರಿನ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಬೇಕಿತ್ತು. ಆದರೆ, ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆ ಕಾರಣಕ್ಕಾಗಿ ಸರಣಿಯನ್ನು ಮುಂದೂಡಲಾಗಿದೆ.

2016ರ ನಂತರ ಶ್ರೀಲಂಕಾ ತಂಡವು ಮೊದಲ ಬಾರಿ ಭಾರತದಲ್ಲಿ ಟಿ20 ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. 2016ರಲ್ಲಿ ಆತಿಥೇಯ ತಂಡವು ಸರಣಿಯನ್ನು 3-0 ಅಂತರದಿಂದ ಗೆದ್ದಿತ್ತು.

ಭಾರತ ತಂಡವು ಕಳೆದ ಜುಲೈನಲ್ಲಿ ಕೊನೆಯ ಬಾರಿ ಟಿ20 ಸರಣಿಯನ್ನು ಆಡಿತ್ತು. ಇಂಗ್ಲೆಂಡ್ನಲ್ಲಿ ಆತಿಥೇಯರ ವಿರುದ್ಧ 3–2ರಿಂದ ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿತ್ತು.

ಟಿ20 ಸರಣಿಯ ವೇಳಾಪಟ್ಟಿ

ಪಂದ್ಯ;ದಿನಾಂಕ;ತಾಣ

ಮೊದಲ ಪಂದ್ಯ;ಡಿ.21;ವಿಶಾಖಪಟ್ಟಣ

ಎರಡನೇ ಪಂದ್ಯ;ಡಿ.23;ವಿಶಾಖಪಟ್ಟಣ

ಮೂರನೇ ಪಂದ್ಯ;ಡಿ.26;ತಿರುವನಂತಪುರ

ನಾಲ್ಕನೇ ಪಂದ್ಯ;ಡಿ.28;ತಿರುವನಂತಪುರ

ಐದನೇ ಪಂದ್ಯ;ಡಿ.30;ತಿರುವನಂತಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.