ಶನಿವಾರ, ಏಪ್ರಿಲ್ 1, 2023
23 °C

Bigg Boss 8: ನೀನಿಲ್ಲದೆ ನನ್ನ ಜರ್ನಿ ಅಪೂರ್ಣ: ಮಂಜುಗೆ ದಿವ್ಯಾ ಸರ್‌ಪ್ರೈಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬಿಗ್ ಬಾಸ್ ಮನೆಯ ಪುರುಷ ಸದಸ್ಯರಿಗೆ ತಕ್ಕ ಪೈಪೋಟಿ ಕೊಡುತ್ತಿದ್ದ ದಿವ್ಯಾ ಸುರೇಶ್ ಅಂತಿಮವಾಗಿ ಹೊರಬೀಳುವ ಮೂಲಕ ಫಿನಾಲೆಗೆ ತೆರಳುವ ಟಾಪ್ ಐವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದರೆ, ಹೋಗುವುದಕ್ಕೂ ಮುನ್ನ ತನ್ನ ಆಪ್ತ ಸ್ನೇಹಿತ ಮಂಜು ಪಾವಗಡ ಅವರಿಗೆ ದಿವ್ಯಾ ಸುರೇಶ್ ಕೊಟ್ಟ ಸರ್‌ಪ್ರೈಸ್ ಎಲ್ಲರ ಗಮನ ಸೆಳೆದಿದೆ.

ಕೇಕ್ ಜೊತೆ ಸಂಭ್ರಮ: ಕೊನೆಯ ವಾರ ಬಿಗ್ ಬಾಸ್ ಕೊಟ್ಟ ಆಸೆ ಪೂರೈಸುವ ಅವಕಾಶವನ್ನು ಬಳಸಿಕೊಂಡ ದಿವ್ಯಾ ಸುರೇಶ್ ಮಂಜು ಪಾವಗಡ ಅವರಿಗೆ ಫ್ರೆಂಡ್‌ಶಿಪ್ ಡೇ ಶುಭಾಶಯ ತಿಳಿಸಲು ಕೇಕ್ ಮತ್ತು ಬಲೂನ್‌ಗಳನ್ನು ಕೇಳಿದ್ದರು. ಅದರಂತೆ, ಬಿಗ್ ಬಾಸ್ ಎಲ್ಲವನ್ನೂ ಪೂರೈಸಿದರು. ಜೊತೆಗೆ, ಗಾರ್ಡನ್ ಏರಿಯಾದಲ್ಲಿ ಅವರಿಬ್ಬರೇ ಇರಲು ಅವಕಾಶ ಮಾಡಿಕೊಟ್ಟರು. ಈ ವೇಳೆ, ಎರಡೂ ಇನಿಂಗ್ಸ್‌ಗಳಲ್ಲಿ ತಮಗೆ ಅತ್ಯುತ್ತಮ ಬೆಂಬಲ ಮತ್ತು ಸಲಹೆ ಕೊಟ್ಟು ನಡೆಸಿದ ಮಂಜು ಪಾವಗಡ ಅವರ ಸ್ನೇಹಪರತೆಯನ್ನು ಕೊಂಡಾಡಿದರು. 

ಮೊದಲ ಇನಿಂಗ್ಸ್‌ನಲ್ಲಿ ನಿನ್ನ ಆಟಕ್ಕೆ ನಾನು ತೊಡಕಾಗಿದ್ದೆ. ನಿನ್ನನ್ನು ಡಾಮಿನೇಟ್ ಮಾಡಿದೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರು ಹಾಕಿದರು. ಈ ವೇಳೆ, ನಾನು ಯಾವಾಗಲೂ ನಿನ್ನ ಸ್ನೇಹಿತ. ಇಲ್ಲಿರಲಿ, ಹೊರಗಿರಲಿ. ಯಾವುದೇ ಸಹಾಯ ಮಾಡಲು ಸಿದ್ಧ ಎಂದು ಮಂಜು ಅಭಯ ನೀಡಿದರು.

ನೀನಿಲ್ಲದೆ ಬಿಗ್‌ಬಾಸ್ ಜರ್ನಿ ಅಪೂರ್ಣ: ಇದಕ್ಕೂ ಮುನ್ನ, ಮನೆಯಲ್ಲಿ ಮಂಗಳವಾರ ಮಂಜು ಪಾವಗಡ ಜರ್ನಿಯ ವಾಲ್ ನಿರ್ಮಿಸಲಾಗಿತ್ತು. ಈ ವೇಳೆ, ಎಲ್ಲಾ ಸ್ಪರ್ಧಿಗಳು ಅವರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಈ ವೇಳೆ, ನೀನಿಲ್ಲದೆ, ಮಂಜು ಪಾವಗಡ ಇಲ್ಲದೆ ನನ್ನ ಬಿಗ್ ಬಾಸ್ ಜರ್ನಿ ಅಪೂರ್ಣ ಎಂದು ದಿವ್ಯಾ ಸುರೇಶ್ ಗದ್ಗದಿತರಾಗಿ ಹೇಳಿದರು. ಹೆಚ್ಚು ಮಾತನಾಡಲು ಬರುತ್ತಿಲ್ಲ. ನೀನು ನನ್ನ ಜೀವನದ ದೊಡ್ಡ ಸ್ಫೂರ್ತಿ ಎಂದು ಅಮ್ಮನಿಗೆ ಹೇಳುತ್ತೇನೆ. ನೀನೆ ಬಿಗ್ ಬಾಸ್ ವಿನ್ನರ್ ಆಗುವಂತೆ ದೇವರಲ್ಲಿ ಪ್ರಾರ್ಥಿಸುವುದಾಗಿ ದಿವ್ಯಾ ಸುರೇಶ್ ತುಂಬು ಹೃದಯದಿಂದ ಹಾರೈಇಸದರು.

ನೀವಿದ್ದಲ್ಲಿ ನಗುವಿರುತ್ತೆ ಎಂದು ಮತ್ತೊಬ್ಬ ಸ್ಪರ್ಧಿ ವೈಷ್ಣವಿ ಹೇಳಿದರು. ಮಂಜು ಸೋಲೊಪ್ಪಿಕೊಳ್ಳದ ವ್ಯಕ್ತಿ, ಬಿಗ್ ಬಾಸ್ ಮುಗಿದ ಕೂಡಲೇ ಅವರಿಗೆ ಮದುವೆಯಾಗಲಿ ಎಂದು ಪ್ರಶಾಂತ್ ಸಂಬರಗಿ ಹಾರೈಸಿದರು. ನೀನೊಬ್ಬ ರಿಯಲ್ ಎಂಟರ್‌ಟೈನರ್ ಎಂದು ದಿವ್ಯಾ ಉರುಡುಗ ಕೊಂಡಾಡಿದರು.
  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು