ಭಾನುವಾರ, ಸೆಪ್ಟೆಂಬರ್ 19, 2021
29 °C

ಬಿಗ್ ಬಾಸ್ ಮಿನಿ ಸೀಸನ್: ಕೆಲವೇ ಗಂಟೆಗಳಲ್ಲಿ ಚಾಲನೆ.. ಏನಿದರ ವಿಶೇಷ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8 ಕ್ಕೆ ತೆರೆ ಬಿದ್ದ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮಿನಿ ಸೀಸನ್ ಆರಂಭವಾಗಿದೆ. ಅಂದಹಾಗೆ, ಈ ಸೀಸನ್ 100 ದಿನಗಳ ಕಾಲ ನಡೆಯುವುದಿಲ್ಲ. 7 ದಿನಗಳು ಮಾತ್ರ ಸ್ಪರ್ಧಿಗಳು ಮನೆಯಲ್ಲಿ ಇರಲಿದ್ದಾರೆ.

ಹೌದು, ಕಿರುತೆರೆ ನಟ-ನಟಿಯರು, ನಿರೂಪಕರನ್ನೊಳಗೊಂಡ 7 ದಿನಗಳ ಶೋ ಇದಾಗಿದೆ. ನಾಮಿನೇಶನ್ ಮತ್ತು ಎಲಿಮಿನೇಶನ್ ಇಲ್ಲದೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ 15 ಸದಸ್ಯರು ಒಟ್ಟಾಗಿ ಒಳಗೆ ಹೋಗಿದ್ದಾರೆ.

ಮನರಂಜನೆಗೆ ಕೊರತೆ ಇಲ್ಲ: ನಾಮಿನೇಶನ್, ಎಲಿಮಿನೇಶನ್ ಹೊರತುಪಡಿಸಿದರೆ ಮಿನಿ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯ ಕೊರತೆ ಇಲ್ಲ. 100 ದಿನಗಳ ಬಿಗ್ ಬಾಸ್ ರೀತಿಯೇ ಟಾಸ್ಕ್‌ಗಳು, ಮನರಂಜನಾ ಕಾರ್ಯಕ್ರಮಗಳು ಎಲ್ಲವೂ ಇರುತ್ತವೆ. ಮನೆಯ ಸದಸ್ಯರೇ ಯಾರು ಉತ್ತಮವಾಗಿ ಟಾಸ್ಕ್ ಆಡುತ್ತಾರೆ. ಯಾರು ಉತ್ತಮ ಎಂಟರ್‌ಟೈನರ್, ಯಾರು ಉತ್ತಮವಾಗಿ ಅಡುಗೆ ಮಾಡುತ್ತಾರೆ ಎಂಬುದನ್ನು ಮನೆಯ ಸದಸ್ಯರೇ ಆಯ್ಕೆ ಮಾಡುತ್ತಾರೆ. ಎಲ್ಲ ವ್ಯವಸ್ಥೆಯೂ ಇದ್ದ ಬಿಗ್ ಬಾಸ್ ಮನೆಯನ್ನು ಈ ಮಿನಿ ಸೀಸನ್‌ ಗೆ ಬಳಸಿಕೊಳ್ಳಲಾಗಿದೆ ಎಂದು ಖಾಸಗಿ ಚಾನಲ್ ಜೊತೆ ಮಾತನಾಡುತ್ತಾ ಕಲರ್ಸ್ ಕನ್ನಡ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.

ಕಿರುತೆರೆ ಧಾರಾವಾಹಿಗಳ ಪಾತ್ರಗಳ ಮೂಲಕ ಖ್ಯಾತರಾಗಿರುವ ನಟಿ ನಟಿಯರು ಇಲ್ಲಿದ್ದಾರೆ. ನಿರೂಪಕ ಅಕುಲ್ ಬಾಲಾಜಿ, ಭವ್ಯಾ ಗೌಡ, ತ್ರಿವಿಕ್ರಮ್, ಚಂದನಾ ಅನಂತಕೃಷ್ಣ, ನಯನಾ ನಾಗರಾಜ್, ಕಿರಣ್ ರಾಜ್, ಗಗನ್ ಚಿನ್ನ‍ಪ್ಪ, ಪ್ರೇರಣಾ ಕಂಬಂ ಮುಂತಾದವರು ಸ್ಪರ್ಧಿಗಳಾಗಿದ್ದಾರೆ. 

ಇಂದು ಮತ್ತು ನಾಳೆ ಮಧ್ಯಾಹ್ನ 4 ಗಂಟೆಯಿಂದ ಬಿಗ್ ಬಾಸ್ ಮಿನಿ ಸೀಸನ್‌ಗೆ ಅದ್ದೂರಿ ಚಾಲನೆ ಸಿಗಲಿದೆ. ಈಗಾಗಲೇ ಪ್ರೊಮೊಗಳಲ್ಲಿ ಸ್ಪರ್ಧಿಗಳ ಹಾಡು,ಕುಣಿತದ ಅಬ್ಬರ ಜೋರಾಗಿದೆ. ಕಿಚ್ಚ ಸುದೀಪ್ ಸಹ ವೀಕೆಂಡ್‌ನಲ್ಲಿ ವೇದಿಕೆಗೆ ಕೊಡಲಿದ್ದು, ಕಾರ್ಯಕ್ರಮದ ಮೆರುಗು ಹೆಚ್ಚಲಿದೆ. 

     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು